ಮಕ್ಕಳ ದಿನಾಚರಣೆ 2023....
ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳು ಹಾಗೂ ಇತರ ಪುಣ್ಯ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವ ಪೂರ್ವಕವಾಗಿ ಆಚರಿಸತಕ್ಕದ್ದು, ಮಾನ್ಯ ಆಯಕ್ತರ ಕಚೇರಿಯ ದಿನಾಂಕ 30-03-2023 ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮುಂದುವರೆದು ಪ್ರತಿ ವರ್ಷ ನವೆಂಬರ್ 14 ರಂದು, ಭಾರತದ ಪ್ರಥಮ ಪಧಾನ ಮಂತ್ರಿಗಳಾದ ಪಂಡಿತ ಜವಾಹರ್ ಲಾಲ್ ನೆಹರುರವರ ಜಯಂತಿಯ ನಿಮಿತ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಈ ಬಾರಿ ನವೆಂಬರ್ 14, ಮಂಗಳವಾರ ಆಚರಿಸಬೇಕಾದ ಮಕ್ಕಳ ದಿನಾಚರಣೆಯ ದಿನದಂದು ಬಲಿಪಾಡ್ಯಮಿ ದೀಪಾವಳಿಯ ಪುಯುಕ್ತ ಸಾರ್ವತ್ರಿಕ ರಜೆ ಇರುತ್ತದೆ. ಈ ಸಾಲಿನ ಮಕ್ಕಳ ದಿನಾಚರಣೆಯನ್ನು ನಂತರದ ಶಾಲಾ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ. ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವುದು ಅತ್ಯಗತ್ಯ.
ಮಕ್ಕಳ ದಿನಾಚರಣೆಯು ಕೇವಲ ಸಾಂಸ್ಕೃತಿಕ ಆಚರಣೆಯಲ್ಲಿ, ಇದು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಅತ್ಯಂತ ಮಹತ್ತರವಾದ ಆಚರಣೆಯಾಗಿದೆ. ನವೆಂಬರ್ 14, ನಂತರದ ಶಾಲಾ ಕರ್ತವ್ಯದ ದಿನದಂದು, ಶಾಲಾ ಪ್ರಾರ್ಥನಾ ವೇಳೆಯಲ್ಲಿ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಜ್ಯದ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಕ್ರಮವಹಿಸಿದರು.
ಮುಂದುವರೆದು, ಶಾಲೆಗಳಲ್ಲಿ, ಮಕ್ಕಳ ದಿನಾಚರಣೆಯ ಪ್ರಯುಕ್ತ ಆಟೋಟಗಳು, ಪುಬಂಧ ಬರವಣಿಗೆ, ಭಾಷಣ, ಚಿತ್ರಕಲೆ, ಕೋಲಾಜ್ ಮೇಕಿಂಗ್, ಪಾತ್ರಾಭಿನಯ, ಸ್ವರಚಿತ ಕವನ, ಪತ್ರ ಲೇಖನ, ದ್ಮ ವೇಷ, ಆಶು ಭಾಷಣ, ಸಮೂಹ ಗಾಯನ, ಚರ್ಚಾ ಸ್ಪರ್ಧೆ, ಘೋಷಣಾ ವಾಕ್ಯ ಬರೆಯುವುದು ಮುಂತಾದ ಶಾಲಾ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ನಿರ್ವಹಿಸುವುದು. .
ಮೇಲೆ ತಿಳಿಸಲಾದ ಚಟುವಟಿಕೆಗಳು ಶಾಲೆಗಳಲ್ಲಿ ನಿರ್ವಹಿಸಬಹುದಾದ ಸಲಹಾತ್ಮಕ ಚಟುವಟಿಕೆಗಳಾಗಿರುತ್ತವೆ. ಶಾಲೆಯ ಸ್ಥಳೀಯ ಪರಿಸರ ಮತ್ತು ಅಗತ್ಯಗಳಿಗನುಗುಣವಾಗಿ, ಶಾಲೆಯಲ್ಲಿ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು, ಚಟುವಟಿಕೆಗಳನ್ನು ನಡೆಸುವುದು. ವಿದ್ಯಾರ್ಥಿಗಳ ವಯಸ್ಸಿಗನುಗುಣವಾಗಿ, ಇತರ ಕ್ರಿಯಾತ್ಮಕ ಮತ್ತು ಕಲಿಕಾ ಪೂರಕ ಸಹಪಠ್ಯ ಚಟುವಟಿಕೆಗಳನ್ನು ರೂಪಿಸಲು ಶಾಲೆಗಳಿಗೆ ಅವಕಾಶವಿದೆ.
ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಶಾಲಾ ಮುಖ್ಯ ಶಿಕ್ಷಕರ ಶಾಲಾ ಎಸ್.ಡಿ.ಎಂ.ಸಿ, ಸ್ಥಳೀಯ ಸಂಘ ಸಂಸ್ಥೆಗಳ ದಿನಾಚರಣೆ, ಮಕ್ಕಳ ಅರ್ಥಪೂರ್ಣವಾಗಿ, ಹಬ್ಬದ ಆಚರಣೆಯನ್ನು ಮಾಡುವುದು.
ಈ ಬಗ್ಗೆ ರಾಜ್ಯದ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುವಂತೆ ಕ್ರಮವಹಿಸಲು...