ಕನ್ನಡಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು
ನನ್ನ ಆನಂದಾ |
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ;
ಮರೆತೆಯಾದರೆ ಅಯ್ಯೋ
ಮರೆತಂತೆ ನನ್ನ |
ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ದೆ;
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ದೆ |
ಗುರುವಿನೊಲ್ನುಡಿಯಂತೆ
ಶ್ರೇಯಸ್ಸು ಬಾಳೆ;
ತಾನ್ನುಡಿಗೆ ದುಡಿದು ಮಡಿ
ಇಹಪರಗಳೇಳೆ |
ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ,
ಮರೆಯದಿರು, ಚಿನ್ನಾ |
ಮರೆತೆಯಾದರೆ ಅಯ್ಯೋ;
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ |
POEM
" " allowfullscreen>" allowfullscreen>



