* ಲಿಂಗವನ್ನು ಸೂಚಿಸುವ ಪದಗಳಿಗೆ ಲಿಂಗಗಳು ಎನ್ನುವರು.
* ಲಿಂಗಗಳಲ್ಲಿ ಮೂರು ವಿಧಗಳು
1) ಪುಲ್ಲಿಂಗ : ಬುದ್ಧಿ , ಸ್ವವಿವೇಚನೆ ಇರುವ ಗಂಡು ಎಂಬ ಅರ್ಥ ನೀಡುವ ಎಲ್ಲಾ ಪದಗಳು ಪುಲ್ಲಿಂಗ.
2) ಸ್ತ್ರೀಲಿಂಗ: ಬುದ್ಧಿ , ಸ್ವವಿವೇಚನೆ ಇರುವ ಹೆಣ್ಣು ಎಂಬ ಅರ್ಥ ನೀಡುವ ಎಲ್ಲಾ ಪದಗಳು ಸ್ತ್ರೀಲಿಂಗ.
3) ನಪುಂಸಕ ಲಿಂಗ: ನಿರ್ದಿಷ್ಟವಾಗಿ ಗಂಡು ಅಥವಾ ಹೆಣ್ಣು ಎಂದು ಅರ್ಥ ನೀಡದಿರುವ ಶಬ್ದಗಳು ನಪುಂಸಕ ಲಿಂಗಗಳು.
(ಎಲ್ಲಾ ಪ್ರಾಣಿಗಳು ( ಸ್ವ ವಿವೇಚನೆ ಇರುವುದಿಲ್ಲ) , ಪಕ್ಷಿಗಳು, ನಿರ್ಜೀವ ವಸ್ತುಗಳು )
ಉದಾಹರಣೆ:
ಹುಡುಗ ಹುಡುಗಿ
ಅವನು ಅವಳು
ಅರಸ ಅರಸಿ
ಅಧ್ಯಕ್ಷ ಅಧ್ಯಕ್ಷೆ
ಅಣ್ಣ ಅಕ್ಕ
ಭಕ್ತ ಭಕ್ತೆ
ಮಾವ ಅತ್ತೆ
ಅಜ್ಜ ಅಜ್ಜಿ
ಕುರುಡ ಕುರುಡಿ
ಒಡೆಯ ಒಡತಿ
ಪುತ್ರ ಪುತ್ರಿ
ಗೃಹಸ್ಥ ಗೃಹಿಣಿ
ಕನ್ನಡಿಗ ಕನ್ನಡತಿ
ದಾಸ ದಾಸಿ
ನಲ್ಲ ನಲ್ಲೆ
ಅನಾಥ ಅನಾಥೆ
ಹಾಡುಗಾರ ಹಾಡುಗಾರ್ತಿ
ಜಾಣ ಜಾಣೆ
ಮುದುಕ ಮುದುಕಿ
ವೈದ್ಯ ವೈದ್ಯೆ
ತಮ್ಮ ತಂಗಿ
ತಂದೆ ತಾಯಿ
ಸಚಿವ ಸಚಿವೆ
ಕಳ್ಳ ಕಳ್ಳಿ
ದೊಡ್ಡಪ್ಪ ದೊಡ್ಡಮ್ಮ
ಮದುಮಗ ಮದುಮಗಳು
ಅಗಸ ಅಗಸಗಿತ್ತಿ
ತರುಣ ತರುಣಿ
ವೃದ್ಧ ವೃದ್ಧೆ
ಗೆಳೆಯ ಗೆಳತಿ
ರಾಕ್ಷಸ ರಾಕ್ಷಸಿ
ಯುವಕ ಯುವತಿ
ನಾಯಕ ನಾಯಕಿ
ಕವಿ ಕವಯಿತ್ರಿ
ಒಡೆಯ ಒಡತಿ
ಚಿಕ್ಕಪ್ಪ ಚಿಕ್ಕಮ್ಮ
ತಂದೆ ತಾಯಿ
ವಿದುರ ವಿಧವೆ
ವಿದ್ವಾನ ವಿದೂಷಿ
ಸಚಿವ ಸಚಿವೆ
ಪತಿ ಪತ್ನಿ
ಗಂಡ ಹೆಂಡತಿ
ರಾಜಕುಮಾರ ರಾಜಕುಮಾರಿ
ಸನ್ಯಾಸಿ ಸನ್ಯಾಸಿನಿ
ಲೇಖಕ ಲೇಖಕಿ
ಶ್ರೀಯುತ ಶ್ರೀಮತಿ
ಚೆಲುವ ಚೆಲುವೆ
ಯಕ್ಷ ಯಕ್ಷಣಿ
ಅಧ್ಯಕ್ಷ ಅಧ್ಯಕ್ಷೆ
ಶಿಕ್ಷಕ ಶಿಕ್ಷಕಿ
ಅಧಿಕಾರಿ ಅಧಿಕಾರಿಣಿ
ಯಜಮಾನ ಯಜಮಾನಿ
ಸೇವಕ ಸೇವಕಿ
ಬೀಗ ಬೀಗತಿ
ಒಕ್ಕಲಿಗ ಒಕ್ಕಲಗಿತ್ತಿ
ಅಗಸ ಅಗಸಗಿತ್ತಿ
ಬ್ರಾಹ್ಮಣ ಬ್ರಾಹ್ಮಣತಿ
ದಡ್ಡ ದಡ್ಡಿ
ಮಾಟಗಾರ ಮಾಟಗಾತಿ
ಸೊಗಸುಗಾರ ಸೊಗಸುಗಿತ್ತಿ
ಹಾವಾಡಿಗ ಹಾವಾಡಗಿತ್ತಿ
ಹೂವಾಡಿಗ ಹೂವಾಡಗಿತ್ತಿ
ಕುಮಾರ ಕುಮಾರಿ
ಪುರುಷ ಸ್ತ್ರೀ
ಗಾಯಕ ಗಾಯಕಿ
ಸದಸ್ಯ ಸದಸ್ಯೆ
ರಾಜ ರಾಣಿ
ನಟ ನಟಿ
ಶರಣ ಶರಣೆ
ಚತುರ ಚತುರೆ
ದೇವರು ದೇವತೆ
ನು ಇವಳು