ಸಂಯುಕ್ತಾಕ್ಷರ
ವ್ಯಂಜನಕ್ಕೆ ವ್ಯಂಜನ ಸೇರಿ ಉಂಟಾಗುವ ಅಕ್ಷರವನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುವರು.
ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳು
1) ಸಜಾತೀಯ ಸಂಯುಕ್ತಾಕ್ಷರ
2) ವಿಜಾತೀಯ ಸಂಯುಕ್ತಾಕ್ಷರ
1) ಸಜಾತೀಯ ಸಂಯುಕ್ತಾಕ್ಷರ : ಒಂದೇ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಒಂದಕ್ಕೊಂದು ಸೇರಿ ಆಗುವ ಸಂಯುಕ್ತಾಕ್ಷರಗಳು ಸಜಾತೀಯ ಸಂಯುಕ್ತಾಕ್ಷರಗಳು .
ಉದಾ : ಸಕ್ಕರೆ - ಕ್+ಕ್+ಅ = ಕ್ಕ
(ಇಲ್ಲಿ ಕ್ ವ್ಯಂಜನಕ್ಕೆ ಕ್ ವ್ಯಂಜನವೇ ಬಂದಿದೆ)
ಉದಾ : ಅಪ್ಪ, ಅಮ್ಮ, ಅಣ್ಣ, ಅಕ್ಕರೆ, ರಾಮಣ್ಣ, ಅಜ್ಜ, ಕಜ್ಜಾಯ, ಕಡ್ಡಿ,
2) ವಿಜಾತೀಯ ಸಂಯುಕ್ತಾಕ್ಷರ : ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಒಂದಕ್ಕೊಂದು ಸೇರಿ ಆಗುವ ಸಂಯುಕ್ತಾಕ್ಷರಗಳು ವಿಜಾತೀಯ ಸಂಯುಕ್ತಾಕ್ಷರಗಳು .
ಉದಾ : ಸಮಗ್ರ - ಗ್+ರ್+ಅ = ಗ್ರ
(ಇಲ್ಲಿ ಗ್ ವ್ಯಂಜನಕ್ಕೆ ರ್ ವ್ಯಂಜನಾಕ್ಷರ ಬಂದಿದೆ)
ಉದಾ : ಭಕ್ತ, ಚಕ್ರ, ಸ್ತ್ರೀ, ಪ್ರಥಮ್, ರಕ್ತ, ಅನುಕ್ರಮ,