ಕನ್ನಡ ವರ್ಣಮಾಲೆ

 



ಕನ್ನಡ ವರ್ಣಮಾಲೆ 




ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.




ಅವುಗಳನ್ನು ......

೧) ಸ್ವರಗಳು, 

೨) ವ್ಯಂಜನಗಳು ಹಾಗೂ 

೩) ಯೋಗವಾಹಗಳು

ಎಂದು 3 ವಿಧಗಳಾಗಿ ವಿಂಗಡಿಸಲಾಗಿದೆ.


ಸ್ವರಗಳು : 

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು (vowels) ಎನ್ನುತ್ತಾರೆ.

ಕನ್ನಡದಲ್ಲಿ ಒಟ್ಟು13 ಸ್ವರಗಳಿವೆ.


ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ


ಸ್ವರಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ :


1) ಹ್ರಸ್ವಸ್ವರಗಳು

2) ಧೀರ್ಘಸ್ವರಗಳು


  ಹ್ರಸ್ವ ಸ್ವರಗಳು : 

      ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಎಂದು .

ಕನ್ನಡದಲ್ಲಿ ಒಟ್ಟು 6 ಹ್ರಸ್ವ ಸ್ವರಗಳಿವೆ.

ಅವುಗಳು :

ಅ ಇ ಉ ಋ ಎ ಒ


 ಧೀರ್ಘಸ್ವರಗಳು : 

       ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಧೀರ್ಘಸ್ವರ ಎನ್ನುವರು.

ಕನ್ನಡದಲ್ಲಿ ಒಟ್ಟು 7 ಧೀರ್ಘಸ್ವರಗಳಿವೆ

ಅವುಗಳು :

ಆ ಈ ಊ ಏ ಐ ಓ ಔ


 ವ್ಯಂಜನಗಳು

ಕ ಖ ಗ ಘ ಙ


ಚ ಛ ಜ ಝ ಞ


ಟ ಠ ಡ ಢ ಣ


ತ ಥ ದ ಧ ನ


ಪ ಫ ಬ ಭ ಮ


ಯ ರ ಲ ವ ಶ ಷ ಸ ಹ ಳ


ಅಲ್ಪಪ್ರಾಣಗಳು - 10

ಮಹಾಪ್ರಾಣಗಳು – 10

ಅನುನಾಸಿಕಗಳು – 5


  ಅಲ್ಪ ಪ್ರಾಣಗಳು

ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.


ಇವು ಒಟ್ಟು ಸಂಖ್ಯೆಯಲ್ಲಿ ೧೦ (10 ) ಇವೆ.


ಕ,ಚ,ಟ,ತ,ಪ


ಗ,ಜ,ಡ,ದ,ಬ


    ಮಹಾಪ್ರಾಣಗಳು

ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ. ಇವು ಸಂಖ್ಯೆಯಲ್ಲಿ ೧೦ (10 ) ಇವೆ,


ಖ,ಛ,ಠ,ಥ,ಫ


ಘ,ಝ,ಢ,ಧ,ಭ


 ಅನುನಾಸಿಕಗಳು

ಇವು ಕನ್ನಡದಲ್ಲಿ ಒಟ್ಟು ೫ (5) ಇದ್ದು, ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುತ್ತವೆ.


ಙ, ಞ, ಣ, ನ, ಮ


ಅವರ್ಗೀಯ ವ್ಯಂಜನಗಳು 

     ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ,


ಯ ರ ಲ ವ ಶ ಷ ಸ ಹ ಳ


 ಯೋಗವಾಹಗಳು 

     ಯೋಗವಾಹಗಳು ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು.ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುತ್ತವೆ.


ಅನುಸ್ವಾರ : ಅಂ

ವಿಸರ್ಗ : ಅಃ