ಪತ್ರ ಲೇಖನದ ಸಂಬೋಧನೆಗಳು:
ತಂದೆಗೆ – ತೀರ್ಥರೂಪು,
ತಾಯಿಗೆ – ಮಾತೃಶ್ರೀ,
ಗುರುಗಳಿಗೆ – ಪೂಜ್ಯ,
ಗೆಳೆಯ/ಗೆಳತಿಗೆ – ಆತ್ಮೀಯ, ನಲ್ಮೆಯ, ಪ್ರೀತಿಯ,
ಚಿಕ್ಕಪ್ಪ ದೊಡ್ಡಪ್ಪನಿಗೆ – ತೀರ್ಥರೂಪು ಸಮಾನ,
ಚಿಕ್ಕಮ್ಮ ದೊಡ್ಡಮ್ಮರಿಗೆ – ಮಾತೃಶ್ರೀ ಸಮಾನ,
ಕಿರಿಯರಿಗೆ -ಚಿರಂಜೀವಿ.
ಹೀಗೆ ವೈಯಕ್ತಿಕ ಪತ್ರಗಳನ್ನು ಬರೆಯುವಾಗ ಬೇರೆ ಬೇರೆ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಸಂಬೋಧನೆಗಳನ್ನು ಬಳಸುತ್ತೇವೆ. ಇದು ನಾವು ಅವರಿಗೆ ತೋರಿಸುವ ಗೌರವವನ್ನು ಸೂಚಿಸುತ್ತದೆ.