ಸಂಯುಕ್ತಾಕ್ಷರ

 

ಸಂಯುಕ್ತಾಕ್ಷರಗಳು  (ಒತ್ತಕ್ಷರಗಳು)


 

        ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯುತ್ತೇವೆ.


ಉದಾ:


ಕ್ + ತ್ + ಅ = ಕ್ತ


ಪ್ + ರ್ + ಅ = ಪ್ರ


ಗ್ + ಗ್ + ಅ = ಗ್ಗ


ಸ್ + ತ್ + ರ್ + ಅ = ಸ್ತ್ರ


 ಸಂಯುಕ್ತಾಕ್ಷರಗಳ ವಿಧಗಳು ...

ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳು ಈ ಕೆಳಗಿನಂತಿವೆ...



1) ಸಜಾತಿಯ ಸಂಯುಕ್ತಾಕ್ಷರಗಳು

2) ವಿಜಾತೀಯ ಸಂಯುಕ್ತಾಕ್ಷರಗಳು


 ಸಜಾತಿಯ ಸಂಯುಕ್ತಾಕ್ಷರಗಳು : 

     ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.


ಸಜಾತೀಯ ಸಂಯುಕ್ತಾಕ್ಷರ ಉದಾಹರಣೆ

ಕತ್ತೆ – ಕ್ + ತ್ + ತ್ + ಎ


ಅಕ್ಕ – ಅ + ಕ್ + ಕ್ + ಅ


ಹಗ್ಗ , ಅಜ್ಜ , ತಮ್ಮ , ಅಪ್ಪ


  ವಿಜಾತಿಯ ಸಂಯುಕ್ತಾಕ್ಷರಗಳು 

      ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.


ಉದಾ:


ಅಗ್ನಿ- ಆ + ಗ್ + ನ್ + ಇ

ಆಪ್ತ – ಆ + ಪ್ + ತ್ + ಅ

ಸೂರ್ಯ, ಮಗ್ನ , ಸ್ವರ, ಪ್ರಾಣ


ಸಂಧ್ಯಾಕ್ಷರಗಳು:

ಕನ್ನಡದ ಸ್ವರಗಳೇ ಸೇರಿ ರೂಪುಗೊಂಡ ಸ್ವರಾಕ್ಷರಗಳು

ಉದಾ : ಅ+ ಇ = ಐ

              ಅ+ಉ= ಔ


(ಐ,  ಔ)