ಡಿಸೆಂಬರ್ ತಿಂಗಳಿನಿಂದ ನೋ ಬ್ಯಾಗ್ ಡೇ ಜಾರಿ ಸಾಧ್ಯತೆ.

        ಶಾಲಾ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ತಪ್ಪಿಸಲು ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಚಿಂತನೆ ಮಾಡಿದ್ದ ನೋ ಬ್ಯಾಗ್ ಡೇ ಕಾರ್ಯಕ್ರಮವನ್ನು ಈ ವರ್ಷದ ಡಿಸೆಂಬರ್ ತಿಂಗಳಿನಿಂದಲೇ ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ.


      ಶಾಲೆಗೆ ಹೋಗುವ ಮಕ್ಕಳಿಗೆ ಅವರ ಬ್ಯಾಗ್ ಹೊರೆಯಾಗಿದ್ದು ಇದರಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಶನಿವಾರ ಬ್ಯಾಗ್ ಲೆಸ್ ಡೇಯನ್ನಾಗಿ ಮಾಡಲು ಈ ಹಿಂದೆ ಚಿಂತಿಸಿತ್ತು ಮತ್ತು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಮಾಡಲಾಗುವುದು ಎಂದು ತಿಳಿಸಿತ್ತು.

 ಆದರೆ ಅದು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ.


ಹಿನ್ನಲೆ : 

   ಕೋವಿಡ್‌ನಿಂದ ಮಕ್ಕಳು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದರು. ಆನ್ ಲೈನ್‌ನಲ್ಲೇ ತರಗತಿಯನ್ನು ಕೇಳುವ ಸ್ಥಿತಿ ಬಂದಿತ್ತು. ಆದರೆ ಕೋವಿಡ್ ಪರಿಣಾಮ ಎರಡು ವರ್ಷ ಸಂಪೂರ್ಣ ಕಲಿಕಾ ಲಾಸ್ ಉಂಟಾಗಿತ್ತು. ಮಕ್ಕಳು ಮನೆಯಲ್ಲೇ ಕುಳಿತು ಪಾಠ ಕಲಿತ ಪರಿಣಾಮ ಬ್ಯಾಗ್ ತೆಗೆದುಕೊಂಡುವ ಹೋಗುವ ರೂಢಿಯು ಆಗಲಿಲ್ಲ ಇದೆಲ್ಲದರ ಪರಿಣಾಮ ಇದೀಗ ಗೊತ್ತಾಗುತ್ತಿದೆ.


ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ಇಳಿಸುವ ದೃಷ್ಟಿಯಿಂದಲೇ ಸೆಮಿಸ್ಟರ್ ಪದ್ದತಿಯನ್ನು ರೂಡಿದೆ ತರಲಾಗಿತ್ತು. ಆದರೂ ವಿದ್ಯಾಾರ್ಥಿಗಳ ಬ್ಯಾಗ್ ಹೆಚ್ಚು ಭಾರವಾಗುತ್ತಿದೆ. ಮಕ್ಕಳು ತೂಕದ ಬ್ಯಾಗ್ ಅನ್ನು ಹೊತ್ತು ತರುವುದರಿಂದ ದೇಹ ರಚನೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಬೆನ್ನು ನೋವು ಕಾಣಿಸುಕೊಳ್ಳುತ್ತಿರುವುದು ಪೋಷಕನರನ್ನು ಆತಂಕಕ್ಕೆ ದೂಡಿತ್ತು. ಇದರ ಪರಿಣಾಮವೇ ನೋ ಬ್ಯಾಗ್ ಡೇ ಚಿಂತನೆಯಾಗಿದೆ.



ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಮುಂದುವರೆದಿದೆ. ಶಾಲೆಗಳಗೆ ಬರುವ ಮಕ್ಕಳು ಎಲ್ಲಾ ಪಠ್ಯಪುಸ್ತಕ ಮತ್ತು ನೋಟ್ ಬುಕ್‌ಗಳನ್ನು ತರುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಅಂತಹ ಸಮಸ್ಯೆ ಉದ್ಭವಿಸುತ್ತಿಲ್ಲ. ಆದರೆ ಖಾಸಗಿ ಶಾಲೆಗಳಲ್ಲಿ ಪಠ್ಯಪುಸ್ತಕ ನೋಟ್ ಪುಸ್ತಕ, ಡೈರಿ, ಇತರೆ ಚಟುವಟಿಕೆ ಪುಸ್ತಕ ಸೇರಿದಂತೆ ಹಲವು ಪುಸ್ತಕಗಳನ್ನು ಮಕ್ಕಳು ಹೊರುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಬೆನ್ನಿನ ಸಮಸ್ಯೆಯ ಜೊತೆ ದೇಹರಚನೆಯ ಸ್ವರೂಪಕ್ಕೂ ತೊಂದರೆಯಾಗುವ ಸಂಭವವಿದೆ.

ಯೋಗ, ಕ್ರೀಡೆ  ವ್ಯಾಯಾಮ ಸೇರಿ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.

ಮಕ್ಕಳ ಬ್ಯಾಗ್ ಹೊರೆಯನ್ನು ತಗ್ಗಿಸಲು ಮತ್ತು ಮಕ್ಕಳ ದೈಹಿಕ ಶಕ್ತಿಯನ್ನು ವೃದ್ಧಿಸುವಂತೆ ಮಾಡಲು ಶಿಕ್ಷಣ ಇಲಾಖೆ ಪ್ರತಿ ಶನಿವಾರವನ್ನು ಬ್ಯಾಗ್ ಲೆಸ್ ಡೇಯನ್ನಾಗಿ ಮಾಡುವ ಚಿಂತನೆಯನ್ನು ಮಾಡುತ್ತಿದೆ. ಪ್ರತಿ ಶನಿವಾರ ಮಕ್ಕಳಿಗೆ ಯೋಗ ತರಗತಿಯನ್ನು ಮತ್ತು ಕ್ರೀಡೆಗೆ ಮಕ್ಕಳನ್ನು ಬಿಡುವುದರಿಂದ ಮಕ್ಕಳ ದೈಹಿಕ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವ್ಯಾಯಾಮದಿಂದ ಮಾನಸಿಕ ಶಕ್ತಿಯು ವೃದ್ಧಿಸುತ್ತದೆ ಎಂದು ಶಿಕ್ಷಣ ಇಲಾಖೆ ಚಿಂತನೆಯನ್ನು ಮಾಡಿದೆ.

ಶಿಕ್ಷಣ ಇಲಾಖೆಯ ಸೂಚನೆ : 

ಶಾಲಾ ಬ್ಯಾಗ್ 10 ರಿಂದ 15 ಕೆಜಿಯಿದ್ದು ಬ್ಯಾಗ್ ಹೊರೆಯನ್ನು ತಗ್ಗಿಸಬೇಕಿದೆ. ಐದು ದಿನಗಳಿಗೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವುದು. ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕ ತರಲು ವಿದ್ಯಾರ್ಥಿಗಳಿಗೆ ಸೂಚನೆಯನ್ನು ನೀಡುವುದು. ಆ ಮೂಲಕ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ತಗ್ಗಿಸಲು ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ಸೂಚನೆಯನ್ನು ನೀಡುತ್ತಿದೆ.

ಬ್ಯಾಗ್ ಭಾರವನ್ನು ಹೇಗೆ ಕಡಿಮೆಮಾಡಬಹುದು.

    ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳು ಬ್ಯಾಗ್ ಹೊರೆಯನ್ನು ತಗ್ಗಿಸಲು ಕ್ರಮವನ್ನು ಕೈಗೊಳ್ಳಲಾಗುತ್ತದೆ. ವೇಳಾಪಟ್ಟಿಗೆ ಅನುಗುಣವಾಗಿ ಬ್ಯಾಗ್ ತರಲು ಸೂಚನೆಯನ್ನು ಮುಖ್ಯೋಪಾಯದ್ಯಾಯರು ನೀಡಬೇಕು. ಪ್ರತಿ ಶನಿವಾರ ಬ್ಯಾಗ್ ಲೆಸ್ ಡೇ ಮಾಡಲು ಸಹ ಚಿಂತನೆಯನ್ನು ಮಾಡಲಾಗುತ್ತಿದ್ದು ಈ ದಿನದಂದು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸುವ ಮತ್ತು ಯೋಗವನ್ನು ಹೇಳಿಕೊಡುವ ಮೂಲ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಶ್ರೀ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.


  ಮುಂದಿನ ತಿಂಗಳು ಅಂದರೆ ಡಿಸೆಂಬರ್ ತಿಂಗಳಿನಿಂದ  ಎಲ್ಲಾ ಶನಿವಾರಗಳಂದು ನಡೆಯುವ ಸಾಧ್ಯೆತೆಗಳು ಹೆಚ್ಚಾಗಿವೆ.


ಬ್ಯಾಗ್ ಲೆಸ್ ಡೇ - ಯಾವ ಚಟುವಟಿಕೆಗಳನ್ನು ಕೈಗೊಳ್ಳಬಹುದು ಡೌನ್‌ಲೋಡ್ ಮಾಡಿರಿ.





Download File