SWACHHATA PAKHWADA - ACTIVITIES LIST

 



1.  01.09.2024-(Swachhata Shapath Day)


ಶಾಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಯಲ್ಲಿ ವೈಯಕ್ತಿಕವಾಗಿ ತನ್ನ ಶಾಲೆ, ಸಮುದಾಯ ಹಾಗೂ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೇಳಿಕೆಯನ್ನು ನೀಡಿ ಶಪಥ ಮಾಡುವುದು. ಸ್ವಚ್ಛತಾ ಪ್ರಚಾರ ಹಾಗೂ ಜಾಗೃತಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ಮಾಡಬಹುದು. ಶಪಥ ಸ್ವೀಕರಿಸಿದ ಶಿಕ್ಷಕ, ವಿದ್ಯಾರ್ಥಿಗಳ ಸಂಖ್ಯೆ ಪೋಟೋ, ವೀಡಿಯೋಗಳು, ಸ್ವಚ್ಛತಾ ಜಾಗೃತಿ ಸಂದೇಶ ಹಾಗೂ ಎಲೆಕ್ಟ್ರಾನಿಕ್ ಬ್ಯಾರ್ನಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುವುದು.


2. ದಿನಾಂಕ: 02.09.2024-03.09.2024 ಸೋಮವಾರ ಹಾಗೂ ಮಂಗಳವಾರ 'ಸ್ವಚ್ಛತಾ ಜಾಗೃತಿ ದಿನಗಳು" (Swachhata Awareness Days)


SMCs/SMDCS/PTAN ನಡೆಸುವುದು. ಸ್ಥಳೀಯರ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ SMCS/PTAಗಳನ್ನು ನಡೆಸುವುದು ಹಾಗೂ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.

ಶಿಕ್ಷಕರು ಶಾಲೆ/ಸಂಸ್ಥೆಯಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿ ಸೌಲಭ್ಯಗಳ ನಿರ್ವಹಣೆಗಾಗಿ ಪ್ರಸ್ತಾವನೆ/ಯೋಜನೆಯನ್ನು ಮಾಡುವುದು.

ವಿದ್ಯಾರ್ಥಿಗಳಲ್ಲಿ ನೈರ್ಮಲ್ಯ ಮತ್ತು ಊಟಕ್ಕೆ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಸೋಪಿನಿಂದ ಕೈ ತೊಳೆಯುವುದು, ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರದ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿಸುವುದು.

ಶಾಲೆ ಮತ್ತು ಮನೆಯಲ್ಲಿ ನೈರ್ಮಲ್ಯ ಕಾಪಾಡುವಂತೆ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಪ್ರೇರೇಪಿಸುವುದು.

ವಾಶ್ ಸೌಲಭ್ಯಗಳ ಅಳವಡಿಕೆ (ಕೈ ತೊಳೆಯುವ ಸೌಲಭ್ಯ ದೈನಂದಿನ ಶುಚಿಗೊಳಿಸುವಿಕೆ ಮತ್ತು ಶೌಚಾಲಯಕ್ಕೆ ನೀರಿನ ಸೌಲಭ್ಯ ಬಳಕೆ, ತ್ಯಾಜ್ಯ ನಿರ್ವಹಣೆ, O&M ಇತ್ಯಾದಿ)ಗಳ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಮರ್ಪಕ ನಿರ್ವಹಣೆ ಮಾಡುವುದು.

ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ವಚ್ಚ ಶೌಚಾಲಯಗಳ ವ್ಯವಸ್ಥೆ ಹಾಗೂ ಸುರಕ್ಷಿತ ನೀರು, ಸೋಂಕು ನಿವಾರಕಗಳು, ಶುಚಿಗೊಳಿಸುವ ಸಿಬ್ಬಂದಿ ಇತ್ಯಾದಿಗಳನ್ನು ವ್ಯವಸ್ಥೆ ಮಾಡುವುದು.

ಜಲ ಜೀವನ್ ಮಿಷನ್ ಅಡಿ ಮಳೆ ನೀರನ್ನು ಸಂಗ್ರಹಿಸುವುದು ಹಾಗೂ ಪೈಪ್ ಗಳ ಮೂಲಕ ನೀರು ಸರಬರಾಜು ಮಾಡುವುದು.

MDM ಅಡುಗೆಮನೆ, ತರಗತಿ ಕೊಠಡಿಗಳು, ಫ್ಯಾನ್‌ಗಳು, ಬಾಗಿಲುಗಳು, ಕಿಟಕಿಗಳನ್ನು ಶುಚಿಗೊಳಿಸುವುದು, ಶಾಲೆಯ ಆವರಣದಲ್ಲಿರುವ ಪೊದೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳುವುದು.

ಹಳೆಯ ಫೈಲ್‌ಗಳು, ಮುರಿದ ಪೀಠೋಪಕರಣಗಳು, ಬಳಸಲಾಗದ ಉಪಕರಣಗಳು, ನಿಷ್ಕ್ರಿಯ ವಾಹನಗಳು ಮುಂತಾದ ಎಲ್ಲಾ ರೀತಿಯ ತ್ಯಾಜ್ಯ ವಸ್ತುಗಳು ಇತ್ಯಾದಿಗಳನ್ನು ಪರಿಶೀಲಿಸಿ ನಿಯಮಾನುಸಾರ ಶಾಲೆಗಳು/ಸಂಸ್ಥೆಗಳ ಆವರಣದಿಂದ ಸಂಪೂರ್ಣವಾಗಿ ವಿಲೇವಾರಿ ಮಾಡುವುದು.


3. ದಿನಾಂಕ: 04.09.2024 - 05.09.2024 ಬುಧವಾರ ಹಾಗೂ ಗುರುವಾರ (Community Outreach Days)


ಎಲ್ಲಾ ಶಿಕ್ಷಕರು ಸ್ಥಳೀಯ ಸಮುದಾಯಗಳಿಗೆ ಸ್ವಚ್ಛತಾ ಕುರಿತು ಜಾಗೃತಿ ಮೂಡಿಸಲು ಹತ್ತಿರದ ಹಳ್ಳಿಗಳಿಗೆ ಭೇಟಿ ನೀಡುವುದು. ತ್ಯಾಜ್ಯ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲು ವಿಶೇಷ . ಗಮನಹರಿಸುವುದು

ಜಲ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಲು, ನೀರಿನ ಸಂರಕ್ಷಣೆ ಹಾಗೂ ಜಲ ಶಕ್ತಿ ಅಭಿಯಾನದ ಬಗ್ಗೆ ಸ್ಥಳೀಯ ಸಮುದಾಯಕ್ಕೆ ಅರಿವು ಮೂಡಿಸುವುದು.

ಪ್ರತಿ ಶಾಲೆಯಲ್ಲಿ ಶಿಕ್ಷಕರ ದಿನವನ್ನು ಸೂಕ್ತವಾಗಿ ಆಚರಿಸುವುದು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸ್ಥಳೀಯ ಪ್ರತಿನಿಧಿಗಳೊಂದಿಗೆ ಸಹಭಾಗಿತ್ವದಲ್ಲಿ ಸ್ವಚ್ಛತೆ ಕುರಿತು ಪ್ರಚಾರ ಮಾಡುವುದು.

ಶಿಕ್ಷಕರು ಸ್ಥಳೀಯ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತಾ ಪಖ್ಯಾಡದ ಥೀಮ್ ಬಗ್ಗೆ ಅರಿವು ಮೂಡಿಸುವ ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸುವುದು.


4. ದಿನಾಂಕ : 06.09.2024 (ಶುಕ್ರವಾರ) ಹಸಿರು ಶಾಲಾ ಚಾಲನೆ (Green School Drive Day)

ವಿದ್ಯಾರ್ಥಿಗಳಿಂದ ನೀರಿನ ಸಂರಕ್ಷಣೆ, ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಹಾಗೂ ಇತರೆ ಪರಿಸರ ಸಂರಕ್ಷಣೆ ವಿಷಯಗಳ ಕುರಿತು ಕಾಲ್ಪನಿಕ ಘೋಷಣೆಗಳು, ಪೋಸ್ಮರ್‌ಗಳು ಮತ್ತು ಕರಪತ್ರಗಳನ್ನು ಸಿದ್ಧಪಡಿಸಿ ಶಾಲಾ ಪ್ರದರ್ಶನಗಳಲ್ಲಿ ಮತ್ತು ಹಳ್ಳಿ/ಪಟ್ಟಣ ಗೋಡೆಗಳು/ಶಾಲಾ ಆವರಣದಲ್ಲಿ ಪ್ರದರ್ಶಿಸುವುದು.

ವಿದ್ಯಾರ್ಥಿಗಳಿಗೆ ನೀರಿನ ಸಂರಕ್ಷಣೆಯ ಜಾಗೃತಿ ಮೂಡಿಸಲು ನೀರಿನ ಕೊರತೆಯ ಪರಿಣಾಮ, ನೈಸರ್ಗಿಕ ಮೂಲಗಳ ರಕ್ಷಣೆ ಬಗ್ಗೆ, ಶಿಕ್ಷಣ ನೀಡಿ ಪ್ರತಿ ವಿದ್ಯಾರ್ಥಿಯು ದಿನಕ್ಕೆ ಕನಿಷ್ಠ ಒಂದು ಲೀಟ‌ರ್ ನೀರನ್ನು ಉಳಿಸಲು ಕಲಿಸುವುದು ಹಾಗೂ ಮನೆ ಮತ್ತು ಶಾಲೆಯಲ್ಲಿ ವಿವೇಚನಾಯುಕ್ತ ಬಳಕೆಗೆ ಪ್ರೋತ್ಸಾಹಿಸುವುದು. ಪ್ರೋತ್ಸಾಹಿಸಲು ನೀರಿನ


5. ದಿನಾಂಕ: 07.09.2024 & 08.09.2024 (ಶನಿವಾರ ಮತ್ತು ಭಾನುವಾರ) ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ದಿನಗಳು (Swachhata Participation Days)


ಜಿಲ್ಲೆಗಳು/ಬ್ಲಾಕ್‌ಗಳು/ಕರ್ಸ್ಮಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಮತ್ತು ಉತ್ತಮ ನಿರ್ವಹಣೆಗಾಗಿ ಸ್ಪರ್ಧೆಗಳನ್ನು ನಡೆಸುವುದು.

ಶಾಲೆಯ ಆವರಣ ಮತ್ತು ಶೌಚಾಲಯ ಸ್ವಚ್ಛತೆ ಕುರಿತು ಪ್ರಬಂಧ ಘೋಷ ವಾಕ್ಯಗಳ ರಚನೆ, ಭಾಷಣ, ರಸಪ್ರಶ್ನೆ, ಚರ್ಚೆಗಳು, ಚಿತ್ರಕಲೆ, ನಾಟಕ, ಕವಿತೆ ಬರವಣಿಗೆ, ಮಾದರಿ ತಯಾರಿಕೆ ಇತ್ಯಾದಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು.


6. ದಿನಾಂಕ: 09.09.2024 & 10.09.2024 (ಸೋಮವಾರ ಮತ್ತು ಮಂಗಳವಾರ) (Hand Wash Days)


ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಸರಿಯಾದ ಕೈ ತೊಳೆಯುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.

• ಮಕ್ಕಳಿಗೆ ಊಟಕ್ಕೆ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಸೋಪಿನಿಂದ ಕೈ ತೊಳೆಯುವ ವಿಧಾನ/ಹೆಜ್ಜೆಗಳು/ಕ್ಷಣಗಳು, ಸಮಯಗಳನ್ನು ಕಲಿಸುವುದು.

ದಿವ್ಯಾಂಗ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳಿಗೆ ತಡೆ ಮುಕ್ತ ಪ್ರವೇಶ ಪರಿಶೀಲಿಸುವುದು ಮತ್ತು ಖಚಿತಪಡಿಸಿಕೊಳ್ಳುವುದು.

ನೀರಿನ ಅಪವ್ಯಯ ಮಾಡದಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.

ಕೈ ತೊಳೆಯುವ ಘಟಕದಿಂದ ಬರುವ ನೀರನ್ನು ಶಾಲಾ ಉದ್ಯಾನಗಳಿಗೆ ಹರಿಸುವುದು.

ಮಕ್ಕಳಿಗೆ ನೀರಿನಿಂದ ಹರಡುವ ರೋಗಗಳ ಬಗ್ಗೆ, ಅರಿವು ಮೂಡಿಸುವುದು.



7. 11.09.2024-3 (ವೈಯಕ್ತಿಕ ನೈರ್ಮಲ್ಯ ದಿನ) Personal Hygiene Day


ಶ್ರವಣ-ದೃಶ್ಯದ ಮೂಲಕ ವಿದ್ಯಾರ್ಥಿಗಳು/ಉದ್ಯೋಗಿಗಳು ಮತ್ತು ಇತರರನ್ನು ಸ್ವಚ್ಛತೆ ಕಾಪಾಡುವ ಕುರಿತು ಪ್ರೇರೇಪಿಸಲು ಕಾರ್ಯಕ್ರಮವನ್ನು ಕೈಗೊಳ್ಳುವುದು.

ವಿದ್ಯಾರ್ಥಿಗಳು ಉಗುರುಗಳನ್ನು ಕತ್ತರಿಸುವ ಮತ್ತು ಸ್ವಚ್ಛವಾಗಿಟ್ಟು ಕೊಳ್ಳುವ ಸರಿಯಾದ ವಿಧಾನ, ಶುದ್ಧ ನೀರಿನಿಂದ ದೈನಂದಿನ ಸ್ನಾನ, ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದು, ತೆರೆದ ಸ್ಥಳದಲ್ಲಿ ಉಗುಳುವುದು, ಶೂಗಳು / ಚಪ್ಪಲಿಗಳನ್ನು ಧರಿಸುವುದು, ಇತರರೊಂದಿಗೆ ವೈಯಕ್ತಿಕ ವಸ್ತುಗಳನ್ನು ಹಂಚಿ ಕೊಳ್ಳದಿರುವ ಬಗ್ಗೆ, ಮಾಹಿತಿ ತಿಳಿಸುವುದು.

ವಿದ್ಯಾರ್ಥಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರನ್ನು ಬಳಸುವ ನೈರ್ಮಲ್ಯ ವಿಧಾನವನ್ನು ಕಲಿಸುವುದು.

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಮಹತ್ತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಹಾಗೂ ಅಭ್ಯಾಸ ಮಾಡಿಸುವುದು.


8: 12.09.2024 (Swachhata School Exhibition Day)


ಸ್ವಚ್ಛತೆ ಕುರಿತು ವಿದ್ಯಾರ್ಥಿಗಳಿಂದ ಪ್ರಬಂಧ/ ಘೋಷಣೆ/ ಕವಿತೆ ಬರವಣಿಗೆ, ಚಿತ್ರಕಲೆ, ಭಾಷಣ, ರಸಪ್ರಶ್ನೆ, ಮಾದರಿಗಳ ತಯಾರಿಕೆ, ಛಾಯಾಚಿತ್ರಗಳು, ವ್ಯಂಗ್ಯಚಿತ್ರಗಳು ಇತ್ಯಾದಿಗಳನ್ನು ರಚಿಸಿ ಶಾಲೆ/ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುವುದು.

ಸ್ಥಳೀಯ ಮರುಬಳಕೆಯ-ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಮನೆಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲು ಸಂಸ್ಕೃತಿಯನ್ನು ಉತ್ತೇಜಿಸುವ ಸ್ಥಳೀಯ ಕೌಶಲ್ಯಗಳನ್ನು ಬಳಸಿಕೊಂಡು ಕಲಾತ್ಮಕ ಕಸದ ತೊಟ್ಟಿಗಳನ್ನು ತಯಾರಿಸುವುದು.

9. 13.09.2024 2 14.09.2024 ລ ລໍ ລ (Swachhata Action Plan Days)


SMC/SDMC ರವರು ಸ್ವಚ್ಛತೆ ಕುರಿತು ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯ ಜನರಲ್ಲಿ ಅರಿವು ಮೂಡಿಸಲು ಶಾಲೆಯ ಸ್ವಚ್ಛತಾ ಕ್ರಿಯಾ ಯೋಜನೆ ತಯಾರಿಸುವುದು.

ಶಾಲೆಯಲ್ಲಿ ಸ್ವಚ್ಛತಾ ಪಖ್ಯಾಡ ಚಟುವಟಿಕೆಗಳ ಬಗ್ಗೆ, ವಿಶೇಷವಾಗಿ ಚರ್ಚಿಸಲು ಬಾಲ ಸಂಸದ್/ಶಾಲಾ ಕ್ಯಾಬಿನೆಟ್ನ ಸಣ್ಣ ಗುಂಪು ಸಭೆಯನ್ನು ಹಮ್ಮಿಕೊಳ್ಳುವುದು,

ಸಮುದಾಯದ ಸದಸ್ಯರು ಮತ್ತು ವಿದ್ಯಾರ್ಥಿಗಳು ಸ್ವಚ್ಛತಾ ಪಖ್ಯಾಡಾ ಅಡಿಯಲ್ಲಿ ಹಮ್ಮಿಕೊಳ್ಳಬಹುದಾದ ನವೀನ ಚಟುವಟಿಕೆಗಳನ್ನು ತಮ್ಮ ಸಲಹೆ ರೂಪದಲ್ಲಿ ನೀಡುವುದು.


10. ದಿನಾಂಕ: 15.09.2024 ಭಾನುವಾರ ಬಹುಮಾನ ವಿತರಣಾ ದಿನ (Prize Distribution Day)


ಸ್ವಚ್ಛತೆಯನ್ನು ಉತ್ತೇಜಿಸಲು ಹಮ್ಮಿಕೊಳ್ಳಲಾದ ಚಿತ್ರಕಲೆ, ಪ್ರಬಂಧ, ಚರ್ಚೆ, ರಸಪ್ರಶ್ನೆ, ಸೋಗನ್, ಕ್ರಾಸ್ಟಿಂಗ್ ಹಾಗೂ ಮಾದರಿ ತಯಾರಿಕೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು, ಶಿಕ್ಷಕರು ಮತ್ತು ಪೋಷಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವುದು.

ಎಲ್ಲಾ ಶಾಲೆಗಳು/ಶೈಕ್ಷಣಿಕ ಸಂಸ್ಥೆಗಳು ಪಟ್ನಾಡದ ಸಮಯದಲ್ಲಿ ಉತ್ತಮವಾಗಿ ಹಮ್ಮಿಕೊಂಡ ಚಟುವಟಿಕೆಗಳ ಮಾಹಿತಿಯನ್ನು ಜಿಲ್ಲಾ ಹಂತಕ್ಕೆ ವೆಬ್‌ಸೈಟ್‌ನಲ್ಲಿ ಅಪ್‌ ಲೋಡ್ ಮಾಡಲು ಸಲ್ಲಿಸುವುದು...