ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ - ಸಪ್ತಾಹ ಆಚರಿಸುವ ಬಗ್ಗೆ

   2024 ರ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಧೈಯ ವಾಕ್ಯವು "ಬಹುಭಾಷೆಗಳ ಮೂಲಕ ಸಾಕ್ಷರತೆಯನ್ನು ಉತ್ತೇಜಿಸುವುದು"



ಸೆಪ್ಟೆಂಬರ್-01 ರಿಂದ 08ರ ವರೆಗೆ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಚಾರಣೆ ಮತ್ತು ಸಪ್ತಾಹ ಆಚರಿಸಲಾಗುತ್ತಿದೆ. ಸಾಕ್ಷರತಾ ಮಹತ್ವ ಕುರಿತಂತೆ ವ್ಯಾಪಕ ಪ್ರಚಾರಗೊಳಿಸುವ ಸಲುವಾಗಿ ಬ್ಲಾಕ್ ಮತ್ತು ಶಾಲಾ ಹಂತದಲ್ಲಿ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚಿಸಿ ಆದೇಶಿಸಿದೆ.


1: ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪಾಥಮಿಕ ಮತ್ತು ಪ್ರೌಢಶಾಲೆಗಳಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಶಾಲಾ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸುವುದು. ಸಾಕ್ಷರತೆಗೆ ಸಂಬಂಧಿಸಿದ ಹಾಡು, ಚರ್ಚಾ ಸ್ಪರ್ಧೆ, ಭಾಷಣ, ರಂಗೋಲಿ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವುದು.


2. ಬ್ಲಾಕ್ ಹಂತದಲ್ಲಿ ಸಾಕ್ಷರತಾ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಆದೇಶದಂತೆ ಕಾರ್ಯಕ್ರಮ ನಿರ್ವಹಿಸುವುದು.


3. ಸೆಪ್ಟೆಂಬರ್ 8ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಪ್ರಯುಕ್ತ ಬ್ಲಾಕ್ ಮತ್ತು ಶಾಲಾ ಹಂತದಲ್ಲಿ ಸಾಕ್ಷರತಾ ಪ್ರತಿಜ್ಞಾವಿಧಿಯನ್ನು ಬೋಧಿಸುವುದು (ಪ್ರತಿಜ್ಞಾವಿಧಿ ಲಗತ್ತಿಸಿದೆ)


4. ಬ್ಲಾಕ್ ಮತ್ತು ಶಾಲಾ ಹಂತದಲ್ಲಿ ನವಸಾಕ್ಷರರು, ಶಿಕ್ಷಣ ತಜ್ಞರು, ಸಾಕ್ಷರ ಕಾರ್ಯಕ್ರಮ ಅನುಷ್ಠಾನಕಾರರನ್ನು ಗುರುತಿಸಿ ಸಭೆಗೆ ಆಹ್ವಾನಿಸಿ ಪುಸ್ತಕಗಳನ್ನು ನೀಡಿ ಗೌರವಿಸುವುದು.


. . ಮೇಲಿನ ಕಾರ್ಯಕ್ರಮಗಳನ್ನು ಆಚರಿಸಿದ ಕುರಿತು ಬ್ಲಾಕ್ ಹಂತದಲ್ಲಿ ಪೋಟೋ, ವರದಿ ಸಂಗ್ರಹಿಸಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ ಹಾವೇರಿ ಇಲ್ಲಿಗೆ ಸಲ್ಲಿಸಲು ತಿಳಿಸಿದೆ....