ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು..

 ಮೇ 01 2024 ಅಂತರಾಷ್ಟ್ರೀಯ ಕಾರ್ಮಿಕ ದಿನ...



International Labour Day 2024:



    ಶ್ರಮವಹಿಸಿ ದುಡಿಯುವ ಕಾರ್ಮಿಕನಿಗೂ ಇರಲಿ ನಿಗದಿತ ಸಮಯ


  ಪ್ರತಿ ವರ್ಷ ಮೇ ತಿಂಗಳ ಮೊದಲ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಮೇ ದಿನ ಎಂದು ಕೂಡ ಕರೆಯಲಾಗುತ್ತದೆ. ಕಾರ್ಮಿಕ ವರ್ಗದ ಸಾಧನೆಗಳನ್ನು ಗೌರವಿಸುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ. ಹಾಗಾದ್ರೆ ಈ ದಿನವು ಹುಟ್ಟಿಕೊಂಡದ್ದು ಹೇಗೆ ಹಾಗೂ ಈ ದಿನದ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.


International Labour Day 2024:


    ಶ್ರಮವಹಿಸಿ ದುಡಿಯುವ ಕಾರ್ಮಿಕನಿಗೂ ಇರಲಿ ನಿಗದಿತ ಸಮಯ...


   ಕಷ್ಟ ಪಟ್ಟು ದುಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಕಾರ್ಮಿಕರೆಂದರೆ ದುಡಿಯುವ ವರ್ಗದವರು. ಬಿಸಿಲು, ಮಳೆ ಎಂದು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ದುಡಿಯುವ ಈ ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ವರ್ಗವು ಒಂದು ಕಾಲದಲ್ಲಿತ್ತು. ಆದರೆ ಇದೀಗ ಕಾಲ ಬದಲಾಗಿದ್ದು ಕಾರ್ಮಿಕರಿಗೂ ಇಂತಿಷ್ಟು ಸಮಯಕ್ಕೆ ಇಂತಿಷ್ಟು ವೇತನ ಎನ್ನುವುದು ನಿಗದಿಯಾಗಿದೆ. ಕಾರ್ಮಿಕರಿಗಾಗಿ ಒಂದು ದಿನವನ್ನು ಮೀಸಲಾಗಿ ಇಡಲಾಗಿದ್ದು, ಮೇ 1 ರಂದು ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.


ಅಂತರಾಷ್ಟ್ರೀಯ ಕಾರ್ಮಿಕರ ದಿನದ ಇತಿಹಾಸ


    ಮೇ 1, 1886 ರಲ್ಲಿ ದಿನದ 15 ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂದು ಬೇಡಿಕೆಯೊಂದಿಗೆ ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಪ್ರತಿಭಟನೆಗೆ ಮುಂದಾದರು. ಈ ಪ್ರತಿಭಟನೆಯ ಕಾವು ಜೋರಾಗಿದ್ದ ಕಾರಣ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಯಿತು. ಪ್ರತೀ ವರ್ಷ ಮೇ 1ರಂದು ಕಾರ್ಮಿಕ ದಿನವನ್ನಾಗಿ ಆಚರಿಸಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟ ಕಾರ್ಮಿಕರ ಬೇಡಿಕೆಯು ಕೊನೆಗೂ ಈಡೇರಿತು. ಪ್ರತಿಭಟನೆಯ ಪರಿಣಾಮವಾಗಿ 1916ರಲ್ಲಿ ಅಮೆರಿಕ ಸರ್ಕಾರವು ಕೆಲಸದ ಅವಧಿಯನ್ನು ಕಡಿಮೆಗೊಳಿಸಿ 8 ಗಂಟೆಗಳ ಕೆಲಸ ಅವಧಿ ಹಾಗೂ ಕಾರ್ಮಿಕರ ದಿನವನ್ನಾಗಿ ಆಚರಿಸುವುದಕ್ಕೆ ಮುಂದಾಯಿತು. ಅಂದಿನಿಂದ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.


    ಭಾರತದಲ್ಲಿ ಕಾರ್ಮಿಕರ ದಿನ ಆರಂಭವಾಗಿದ್ದು ಯಾವಾಗ?

ಭಾರತದಲ್ಲಿ 1923 ನೇ ಇಸವಿಯ ಮೇ 1 ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಅದಲ್ಲದೇ, ಸದನದಲ್ಲಿ ಕಾರ್ಮಿಕರ ದಿನಾಚರಣೆಯಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಬೇಕು ಹಾಗೂ ಕಾರ್ಮಿಕರಿಗೆ ರಜೆ ನೀಡಬೇಕೆಂದು ಮಸೂದೆ ಮಂಡಿಸಲಾಯಿತು. ಅಂದಿನಿಂದ ಪ್ರತಿ ವರ್ಷ 1 ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ...



(ಸಂಗ್ರಹ)

 

WhatsApp Group Join Now
Telegram Group Join Now