ವಿಶ್ವ ಪರಿಸರ ದಿನಾಚರಣೆ-2024ರ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, (ಕನ್ನಡ & ಇಂಗ್ಲೀಷ್ - 1000 ಪದಗಳಿಗೆ ಮೀರದಂತೆ) “ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು” (Impacts of Climate Change on Soil and Land) ಎಂಬ ವಿಷಯದ ಮೇಲೆ ಪ್ರಬಂದವನ್ನು ಬರೆಯಬಹುದು.





ಮಾನ್ಯರೇ,



ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿದ್ದು, ವಿಶ್ವ ಪರಿಸರ ದಿನಾಚರಣೆ-2024ರ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು,  (ಕನ್ನಡ & ಇಂಗ್ಲೀಷ್ - 1000 ಪದಗಳಿಗೆ ಮೀರದಂತೆ) “ಭೂಮಿ ಮತ್ತು ಮಣ್ಣಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು” (Impacts of Climate Change on Soil and Land) ಎಂಬ ವಿಷಯದ ಮೇಲೆ ಪ್ರಬಂದವನ್ನು ಬರೆದು, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ  ಕಳುಹಿಸಲು ಕಡೆಯ ದಿನಾಂಕ: 27/05/2024 .  ಉತ್ತಮ ಪ್ರಬಂಧಗಳಿಗೆ ಸೂಕ್ತ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ  www.kstacademy.in ನಲ್ಲಿ ಹಾಗೂ ಮೊ.9008675123 ಪಡೆಯಬಹುದಾಗಿದೆ. ಪ್ರಬಂಧ ಸ್ಪರ್ಧೆಯ ಮಾರ್ಗಸೂಚಿಯನ್ನು ಈ  ಇಮೇಲ್ ನೊಂದಿಗೆ ಲಗತ್ತಿಸಿದೆ.



ಈ ಮಾಹಿತಿಯನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ  ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಅನುವಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಮ್ಮ ಮೂಲಕ ಸೂಚಿಸಬೇಕೆಂದು ಕೋರುತ್ತೇನೆ.



ವಂದನೆಗಳೊಂದಿಗೆ,



ತಮ್ಮ ವಿಶ್ವಾಸಿ,



ಡಾ  ಎ. ಎಂ. ರಮೇಶ್


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ....