ಸವಿತಾ ಮಹರ್ಷಿಯ ಜಯಂತಿ...(ರಥಸಪ್ತಮಿ ದಿನ)

      ಫೆಬ್ರುವರಿ 16-ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ ಸವಿತಾ ಮಹರ್ಷಿ ಅವರ ಜಯಂತಿಯಂದು ಅನಂತ ಶತಕೋಟಿ ನಮನಗಳು:


''ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್'' ||


    ಈ ಮೇಲಿನ ಗಾಯಿತ್ರಿ ಮಂತ್ರವು, ಸವಿತಾ ಮಹರ್ಷಿಯ ಪುತ್ರಿಯಾದ ಗಾಯತ್ರಿ ದೇವಿಯ ಮಂತ್ರದಲ್ಲಿ ಸವಿತೃ ಅಥವಾ ಸವಿತಾ ಎಂಬ ಪದವು ಸಷ್ಟವಾಗಿ  ಕಾಣುತ್ತದೆ.ಸಂಸ್ಕೃತ ಗ್ರಂಥವಾದ ನಾಭಿಕ್ ಪುರಾಣದಲ್ಲಿ ಸವಿತಾ  ಮಹರ್ಷಿ ಜನಿಸಿದ ಬಗ್ಗೆ ಉಲ್ಲೇಖಿಸಿರುವುದನ್ನು ಕಾಣುತ್ತೇವೆ.

ಹೌದು ಈ ಸಂಸ್ಕೃತ ಮಂತ್ರದಲ್ಲಿ ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ. ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ.

      12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರಿಗೆ ಆಶ್ರಯ ನೀಡಿದ ದೊರೆ ಸವಿತಾ ಸಮಾಜದ ಬಿಜ್ಜಳ ದೊರೆ ಎಂಬುದು ನಮಗೆ ಗೊತ್ತಿರುವ ಸಂಗತಿಯಾಗಿದೆ ಎಂದು ಹೇಳಬಹುದು.

ಈ ಮೇಲಿನ ಗಾಯಿತ್ರಿ ಮಂತ್ರದ ಅರ್ಥವೆನೆಂದರೆ....


" ದೇವರು ನನಗೆ ನನ್ನ ಸ್ವಂತ ಉಸಿರಿನಂತೆ ಪ್ರಿಯನಾಗಿದ್ದಾನೆ... ಅವನು ನನ್ನ ನೋವುಗಳನ್ನು ಹೋಗಲಾಡಿಸುವವನು ಮತ್ತು ಸಂತೋಷವನ್ನು ಕೊಡುವವನು...ನಾನು ದೈವಿಕ ಸೃಷ್ಟಿಕರ್ತನ ಪರಮ ಆರಾಧ್ಯ ಬೆಳಕನ್ನು ಧ್ಯಾನಿಸುತ್ತೇನೆ... ಅದು ನನ್ನ ಆಲೋಚನೆ ಮತ್ತು ತಿಳುವಳಿಕೆಯನ್ನು ಪ್ರೇರೇಪಿಸುತ್ತದೆ

ಎಂದು ಈ ಮಂತ್ರದಲ್ಲಿ ತಿಳಿಸಲಾಗಿದೆ.


    ಗಾಯತ್ರಿ ಮಂತ್ರ ಹಿಂದೂ ಧರ್ಮದ ಅತ್ಯಂತ ಶ್ರೇಷ್ಠಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದೂ ಕರೆಯುತ್ತಾರೆ.


    ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ. ಪೌರಾಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷ ದಲ್ಲಿ ಜನಿಸಿದರು.    ಸೂರ್ಯ ಸಾಕ್ಷಾತ್ ಶ್ರೀಮನ್ನಾರಾಯಣನ ಪ್ರತಿರೂಪ.ಈ ದಿನದಂದು ಸೂರ್ಯನಾರಾಯಣನ ಉಪಾಸಕರಿಗೆ ಸವಿತಾ ಜನರೆಂದು ಕರೆಯುವರು.

      ಧಾರ್ಮಿಕ ಹಿನ್ನೆಲೆ:_

     


     ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತೀತಿ ಇದೆ. ಸವಿತಾ ಸಮಾಜದವರನ್ನು ಸೂರ್ಯ ವಂಶಕ್ಕೆ ಸೇರಿದವರೆಂದು ಹೇಳಬಹುದು.



ಪೇಟೆ-ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಉತ್ಸವ, ಜಾತ್ರೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಂಗಳವಾದ್ಯವಾಗಿ ನುಡಿಸುವ ನಾದಸ್ವರ ನಾದ ಸವಿತಾ ಸಮಾಜದ ಸಂಕೇತವೂ ಹೌದು. ಮುಜರಾಯಿ ಸಹಿತ ಹಲವು ಖಾಸಗಿ ದೇಗುಲಗಳಲ್ಲೂ ಸವಿತಾ ಸಮಾಜದವರ ನಾದಸ್ವರ ಸೇವೆ ಇಲ್ಲದೆ ಉತ್ಸವ ಪೂರ್ಣ ವಾಗದು ಎಂಬ ನಂಬಿಕೆ ಇದೆ. ಆದರೆ, ಈ ಒಂದು ಚಟುವಟಿಕೆ ಹೊರತುಪಡಿಸಿ ಇನ್ನುಳಿದ ಎಲ್ಲ ಕಾರ್ಯದಲ್ಲೂ ಈ ಸಮಾಜವನ್ನು ದೂರ ಇಡಲಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಸವಿತಾ ಸಮಾಜದವರು ಶೇಕಡ 6ರಷ್ಟಿದ್ದಾರೆ. ಇವರಲ್ಲಿ ಶೇ.70 ಮಂದಿ 'ಗ್ರಾಮೀಣ ಭಾಗದಲ್ಲಿ ವಾಸವಿದ್ದಾರೆ. ಸಾಕ್ಷರತೆ ಪ್ರಮಾಣ ಕೂಡ ಕಡಿಮೆ. ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಈ ಸಮುದಾಯದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕ್ಷೌರ ಮಾಡುವ ಕೆಲಸ

ಮಾಡಿದರೂ, ಕೀಳು ಭಾವನೆಯಿಂದ ನೋಡುವ ಮನಸ್ಥಿತಿ ದೂರವಾಗಿಲ್ಲ. ಈ ಸಮಾಜದವರನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. 

ಪ್ರವರ್ಗ 1ಎ ಮೀಸಲಿಗೆ ಆಗ್ರಹ:

ರಾಜ್ಯದಲ್ಲಿ ಸವಿತಾ ಸಮಾಜವು ತೀರಾ

ಹಿಂದುಳಿದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ, ಸಮುದಾಯದ ಹಿಂದುಳಿದಿರುವುದಕ್ಕೆ ತಕ್ಕಂತೆ ಸೌಲಭ್ಯ ಸೌಲಭ್ಯ ಒದಗಿಸಲು ಸರಿಯಾದ

ಮಾನದಂಡಗಳನ್ನು ಅನುಸರಿಸದ ಕಾರಣ ಸರ್ಕಾರಿ ಸವಲತ್ತು ಮರೀಚಿಕೆಯಾಗಿವೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಪರಿಗಣಿಸಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಸಲಹೆ ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ನೀಡಿದ್ದವು ಹಾಗೂ ಡಾ. ಸಿ.ಎಸ್.ದ್ವಾರಕನಾಥ್ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರಿದು ಈವರೆಗೂ ಜಾರಿಗೆ ಬಂದಿಲ್ಲ. ಎಸ್‌ಸಿ/ಎಸ್‌ಟಿ ಸ್ಥಾನಮಾನ ಕಲ್ಪಿಸದಿದ್ದಲ್ಲಿ 'ಪ್ರವರ್ಗ 1ಎ'ಗೆ ಸೇರಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ.

(ಪತ್ರಿಕಾ ವಿವರಣೆ ಸಂಗ್ರಹ)