ಮಡಿವಾಳ ಮಾಚಯ್ಯ ದಿನಾಚರಣೆ 01/02/2024

    


ವೀರಗಂಟೆಯ ಮಡಿವಾಳ ಮಾಚಯ್ಯ

    ವೀರಗಂಟೆಯ ಮಡಿವಾಳ ಮಾಚಯ್ಯ


    ಬಿಜಾಪುರ ಜಿಲೆಯ ಸಿಂಧಗಿ ತಾಲೂಕಿನ 'ದೇವರ ಹಿಪ್ಪರಗಿಯಲ್ಲಿ' ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು ಜನಿಸಿದ್ದು ಕ್ರಿ .ಶ ೧೧೨೦-೧೧೩೦ ರ ನಡುವೆ.


  ಇದು ಬಸವನಬಾಗೇವಾಡಿಯಿಂದ ಸುಮಾರು 25 ಕಿ.ಮಿ.ಗಳ ಅಂತರದಲ್ಲಿದೆ. ಮಾಚಯ್ಯನ ದೀಕ್ಷಾ ಗುರು ಮಲ್ಲಿಕಾರ್ಜುನ, ಹೀಗಾಗಿ ಮನೆ ಕೆಲಸ ಬಟ್ಟೆ ಒಗೆಯುವದಾದರೂ ದಿನಗಲಸ ಶಿವಭಕ್ತಿ ಆಗಿತ್ತು, ಬಸವಣ್ಣನ ಕೀರ್ತಿ ಕೇಳಿ ಆ ಹೊಸ ಧರ್ಮಕ್ಕೆ ಆಕರ್ಷಣೆಗೊಂಡು ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗನೀತ.


     ಮಾಚಯ್ಯ ಕಲ್ಯಾಣದಲ್ಲಿ ಕಾಯಕವನ್ನಾಗಿಸಿಕೊಂಡುದ್ದು ಬಟ್ಟೆ ಮಡಿ ಮಾಡುವುದನ್ನು, ಅದು ಶಿವಶರಣರ ಬಟ್ಟೆಗಳನ್ನು ಮಾತ್ರ. ಈತನ ಕಾರ್ಯತತ್ಪರತೆ, ನ್ಯಾಯ ನಿಷ್ಟುರತೆ, ಲಿಂಗ-ಜಂಗಮ ನಿಷ್ಠೆಯ ಕಂಡು ಮಾಚಯ್ಯನನ್ನು ತಮ್ಮ ಆಪ್ತವಲಯದಲ್ಲಿ ಸೇರಿಸಿಕೊಂಡು ಬಲಗೈ ಬಂಟನನ್ನಾಗಿಸಿಕೊಂಡರು ಬಸವಣ್ಣನವರು. ಅಣ್ಣನವರಿಗೆ ಸರ್ವಸ್ವವನ್ನು ಅರ್ಪಿಸಿದ ಮಹಾಮಹಿಮನೀತ, ಬಸವಣ್ಣನನ್ನೇ ಪ್ರಾಣವನ್ನಾಗಿಸಿಕೊಂಡಾತ ಮಾಚಯ್ಯ ತಂದೆ, ಉಪಲಬ್ಧವಿರುವ 353 ವಚನಗಳಲ್ಲಿ ಹೆಚ್ಚಿನವು ಅಣ್ಣನವರ ಸ್ತುತಿಪರವಾದವುಗಳಾಗಿವೆ.


       ಈತ ಸ್ವಚ್ಛಗೊಳಿಸುತ್ತಿದ್ದುದು ಶಿವಭಕ್ತರ ಬಟ್ಟೆಗಳನ್ನು ಮಾತ್ರ. ಹೀಗಾಗಿ ಶಿವಭಕ್ತರಲ್ಲದವರ ಬಟ್ಟೆಗಳನ್ನು ಮುಟ್ಟುತ್ತಿರಲಿಲ್ಲ. ಹಾಗೆ ಮಡಿ ಮಾಡಿದ ಶಿವಭಕ್ತರ ಬಟ್ಟೆಗಳನ್ನು ಯಾವ ಭವಿಯೂ ಮುಟ್ಟುವಂತಿರಲಿಲ್ಲ ಅದಕ್ಕಾಗಿ ಮಡಿ ಮಾಡಿದ ಬಟ್ಟೆಗಳನ್ನು ಗಂಟುಕಟ್ಟಿ ತಲೆಯ ಮೇಲಿಟ್ಟುಕೊಂಡು ಬಲಗೈಯಲ್ಲಿ ಬಿಚ್ಚುಗತ್ತಿಯನ್ನಿಡಿದು, ಎಡಗೈಯಲ್ಲಿ ಎಚ್ಚರಿಕೆಯ ಗಂಟೆಯನ್ನಿಡಿದು ಸಾಗುತ್ತಿದ್ದ. ಯಾರಾದರೊಬ್ಬ ಭವಿ ಈ ಮಡಿಬಟ್ಟೆಗಳನ್ನು ಮುಟ್ಟಿದ್ದಾದರೆ ಆತನಿಗೆ ತಕ್ಕಶಾಸ್ತಿಯನ್ನು ಮಾಡಿಬಿಡುತ್ತಿದ್ದ.


    ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು, ಅಚಲ ಕಾಯಕ ನಿಷ್ಟನಾಗಿದ್ದ , ಹಿಮಾಲಯದಷ್ಟು ಧೃಢನಾಗಿದ್ದ , ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದ. ಜಂಗಮ ವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ 'ಮಲ್ಲಿಗೆಮ್ಮಳ' ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭದ ದಂತ ಕಥೆ ಹಿಮಾಚಲಕ್ಕಿಂತಲೂ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವನಾಗಿದ್ದ ಎಂಬುದನ್ನು ತಿಳಿಸುತ್ತದೆ.


ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು 'ಮಡಿ' ಮಾಡಿ ಮುಟ್ಟಿಸುವ ಕಾಯಕ ಇವರಾದಾಗಿತ್ತು . ಮಡಿ ಬಟ್ಟೆ ಹೊತ್ತುಕೊಂಡು 'ವೀರ ಘಂಟೆ' ಬಾರಿಸುತ್ತ , ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದರು .



      ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ತುಂಡರಿಸಿ ಚೆಲ್ಲುತ್ತ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ಭವಿಯೋರ್ವ ಮಡಿ ಗಂಟು ಮುಟ್ಟಿ ಮೈಲಿಗೆಗೊಳಿಸಿದ್ದಕ್ಕೆ ಆತನ ಶಿರವನ್ನು ಆಕಾಶಕ್ಕೆ ತೂರಿದ ಘಟನೆಯಿಂದಾಗಿ, ಭಕ್ತಿ ಭಾವದಿಂದ ಮಡಿವಾಳಯ್ಯನನ್ನು ಜನರು ಗೌರವಿಸುತ್ತಿದ್ದರು. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಆತ ಮುಟ್ಟುತ್ತಿರಲಿಲ್ಲ. 'ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ' ಎಂಬುದನ್ನು ಜನಕ್ಕೆ ಸಾರಿದರು.


      ಮೇಲುನೋಟಕ್ಕೆ ಈತ ಹೊರಗಿನ ಮಡಿವಾಳ ಆದರೆ ನಿಜವಾಗಿ ನೋಡಿದರೆ ಸಮಸ್ತರ ಅಂತಃಕರಣದಲ್ಲಿದ್ದ ಮಾಯಾಂಬರದ ಮೈಲಿಗೆಯನ್ನು ತೊಳೆಯುವವನಾಗಿದ್ದ.


        ಹಿಪ್ಪರಿಗೆಯಲ್ಲಿನ ಕಲ್ಲಿನಾಥನೇ ಈತನ ಆರಾಧ್ಯ ದೈವವಾದ ಮೇದಾರ ಕೇತಯ್ಯನು ಮರಣಿಸಿದಾಗ ಮರುಜನ್ಮ ಕರುಣಿಸಿದ ಮಹಾತ್ಮನೀತ, ಕಲ್ಯಾಣದ ಪುಣ್ಯನೆಲದಲ್ಲಿ ಕಾಲಿಡುವ ಮುನ್ನವೇ ಅಕ್ಕ ಮಹಾದೇವಿಯನ್ನು ಹಡದಿ ಹಾಸಿ ಸ್ವಾಗತಿಸಿದಾತ. ಆಕ್ಕಮಹಾದೇವಿ ಅದರ ಮೇಲೆ ಕಾಲಿಡದೆ ಭಕ್ತಿಯಿಂದ ನಮಿಸಿ ಮೈಗೆ ಹೊದೆದುಕೊಳ್ಳುತ್ತಾಳೆ. ಬಸವಣ್ಣನವರ ಆಣತಿಯಂತೆ ಕಲ್ಯಾಣದ ಕ್ರಾಂತಿಯಲ್ಲಿ ಚೆನ್ನಬಸವಣ್ಣನವರಿಗೆ ಬೆಂಗಾವಲಾಗಿ ನಿಲ್ಲುತ್ತಾನೆ. ಬೆನ್ನಟ್ಟಿದ ಬಿಜ್ಜಳನ ಸೈನ್ಯವನ್ನು ಕೊಚ್ಚಿ ಹಾಕಿದಾತ. ಇಡೀ ವಚನ ಸಾಹಿತ್ಯ ಉಳುವಿಯನ್ನು ಸೇರುವಲ್ಲಿ ಮಾಚದೇವನ ಪಾತ್ರ ಅತ್ಯಂತ ಹಿರಿಯದು. ವೀರಗಣಾಚಾರಕ್ಕೆ ಮಾಚಯ್ಯನವರೆಂದು ಪ್ರಸಿದ್ಧಿಪಡೆದಿದ್ದಾರೆ. ಕಾರಣವೇನೆಂದರೆ ಶರಣಕುಲ ಸಂರಕ್ಷಣೆಯ ವೀರವ್ರತವನ್ನು ಕೈಗೊಂಡು ವೀರಮಾಹೇಶ್ವರ ನಿಷ್ಠೆ ಹೊಂದಿದ ಈತ ವೀರಭದ್ರನ ಅಪರವತಾರವೆಂದು ಹೇಳುತ್ತಾರೆ.


      ಮಾಚಯ್ಯ ಮಹಾಮನೆಯ ಮಹಾಚೇತನ, ಅನುಭವ ಮಂಟಪದ ಮಹಾನುಭಾವಿ ಹಾಗೆ ಬಿಜ್ಜಳನ ಮದ್ದಾನೆಯ ಮದವಡಗಿಸಿದ ಮಹಾಶಕ್ತಿಶಾಲಿ, ಉಪಲಬ್ಧವಾದ ಈತನ ವಚನಗಳು 353, ಈತನ ವಚನಾಂಕಿತ ಕಲಿದೇವರದೇವಾ ವಚನ ಸಾಹಿತ್ಯವನ್ನು ಸುರಕ್ಷಿತವಾಗಿಟ್ಟ ಮೇಲೆ ಅದಕ್ಕೆ ಧಕ್ಕೆಯಿಲ್ಲವೆಂದರಿತು ತನ್ನ ಹುಟ್ಟೂರಿಗೆ ಹೋಗಿ ಕ್ರಿ.ಶ. 1170 ರ ಸುಮಾರಿಗೆ ಲಿಂಗೈಕ್ಯನಾಗುತ್ತಾನೆ. ಅಂದಿನಿಂದ ಹಿಪ್ಪರಿಗಿ ದೇವರ ಹಿಪ್ಪರಿಗೆಯೆಂದು ಖ್ಯಾತಿಯಾಯಿತು.






ಗಣಾಚಾರ ಸಂಪನ್ನ ವೀರ - ಮಡಿವಾಳ ಮಾಚಿದೇವ ...




ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು, ಹರಿಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯ್ತು. ಆ ಮಾರ್ಗ ಮಧ್ಯದಿಂದ ಮಾಚಿ ತಂದೆ ನಡಕೊಂಡು ಬರುತ್ತಾನೆ...


ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು.


      ಇದು ಮಡಿವಾಳಯ್ಯನ 'ಅಹಂಕಾರವೆಂದು' ಭಾವಿಸಿದ ಬಿಜ್ಜಳ ಅವರನ್ನು ಸೆರೆ ಹಿಡಿದು ತರಲು ಕುಂಟ -ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟ ವರನ್ನಾಗಿ ಮಾಡಿ ಕಳುಹಿಸಿದ. ಇದರಿಂದ ಉರಿದೆದ್ದು ಬಿಜ್ಜಳ 'ಮದೋನ್ಮತ್ತ' ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. (ಬಹುತೇಕ ಮಡಿವಾಳ ಬಂಧುಗಳ ಮನೆಯಲ್ಲಿ ಈ ಸನ್ನಿವೇಶದ ಫೋಟೋ ಇರುವುದು - ಆದ್ರೆ ಬಹು ಜನರಿಗೆ ಅದರ ಹಿನ್ನೆಲೆ ಗೊತ್ತಿಲ್ಲ..)ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು...


ಮುಂದೆ 'ಕಲ್ಯಾಣ ಕ್ರಾಂತಿ'ಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ 'ಜವಾಬ್ಧಾರಿ' ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ 'ಭೀಮ ರಕ್ಷೆಯಾಗಿ' ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯ.



   ಸಮಸ್ತ ಶರಣರು ಉಳಿವೆಯಲ್ಲಿ ಲಿಂಗೈಕ್ಯರಾಗಲು ತಮ್ಮ ಮಹಾನ್ ಕರ್ತವ್ಯ ಪೂರೈಸಿ ಸಿಂದಗಿ ತಾಲೂಕಿನ ಕಲಿಪುರ (ಇಗಿನ ಕಲಕೇರಿ)ತನ್ನ ಗುರುವಾದ ವೀರಘಂಟೈರ ಜೊತೆಗೆ ಜೀವಂತ ಸಮಾದಿಯಾಗಿ ಗುರು ಶಿಷ್ಯರು ಐಕ್ಯರಾದರು....ಇಂದಿಗೂ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯ ದಿನ ಮೂಲಾ ನಕ್ಷತ್ರದ ಸಮಯದಲ್ಲಿ ರಥೋತ್ಸವ ನಡೆಯುತ್ತದೆ. ಸುಮಾರು ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ವರ್ಷದಲ್ಲಿ ಎರಡು ಸಲ ಅಗ್ನಿ ಉತ್ಸವ ನಡೆಯತ್ತದೆ.ಕಲಕೇರಿಯಲ್ಲಿ ಮಡಿವಾಳ ಮಾಚಿ ದೇವರ ಕೊಂಡಾಡಲು ಅಕ್ಷರಗಳೇ ಸಾಲದು....






ಮಡಿವಾಳ ಮಾಚಯ್ಯ ನ ಬಗೆಗೆ ಕೆಲವು ಐತಿಹ್ಯಗಳಿವೆ ಅವುಗಳಲ್ಲಿ ಕೆಲವು ...




ಮೊದಲನೆಯ ಪ್ರಸಂಗ

ಬದಲಾಯಿಸಿ

ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕೊಯ್ಯುತ್ತಿದ್ದಾಗ ಧರಿಸಿದ 'ಇಷ್ಟ ಲಿಂಗ ' ಜಾರಿ ಕೆರೆಯೊಳಗೆ ಬೀಳುತ್ತದೆ. ಜಾರಿ ಬಿದ್ದ ಲಿಂಗ ಮತ್ತೇಕೆ? ಭಾವ ಲಿಂಗವೊಂದನ್ನೇ ಪೂಜಿಸಿದರೆ ಸಾಕೆಂದು ಹುಲ್ಲಿನ ಹೊರೆ ಹೊತ್ತು ಮನೆಗೆ ಮರಳುವನು. ಆಗ ಲಿಂಗದೇವ, ಮಾಚಿದೇವರ ಮೊರೆ ಹೋಗುತ್ತಾನೆ. ಮಾಚಿ ತಂದೆಗಳು 'ಸವಿ ಬೇಕು- ಹಣ್ಣು ಬೇಡವೆಂದರೆ' ಹೇಗೆ? ಗುರು ಪೂಜೆ ಅರಿದೊಡೆ ಲಿಂಗ ಪೂಜೆ ಬಿಡಲಾಗದೆಂದು ಚಂದ್ರಯ್ಯನವರ ತಪ್ಪನ್ನು ಅರಿವನ್ನುಂಟುಮಾಡುವರು - ಅದೊಂದು ದಿವ್ಯ ಪ್ರಸಂಗ.


ಎರಡನೆಯ ಪ್ರಸಂಗ

ಬದಲಾಯಿಸಿ

'ಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ' ಬಸವಣ್ಣನವರು 'ಅಹಂ' ಭಾವನೆಯಿಂದ ಮಾತನಾಡಿರುತ್ತಾರೆ, ಆಗ ಮಾಚಿದೇವರು ಬಸವಣ್ಣನವರಿಗೆ ' ನೀವೊಬ್ಬರೇ ದಾನ ಮಾಡಲು ಹುಟ್ಟಿದ ದಾನಿಗಳು , ಉಳಿದೆಲ್ಲ ಭಕ್ತರು ಭಿಕಾರಿಗಳು, ದರಿದ್ರರೆ' ? ಎಂದು ಪ್ರಶ್ನಿಸುತ್ತಾರೆ. ಮುಂದೆ ಎನ್ನ ಮಹಾನುಭಾವರ ಬಡತನದಿರವ ನಿನಗೆ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು. ಹೀಗೆ ವಿನಯ, ಇಂದ್ರಿಯ ನಿಗ್ರಹ, ನಿರಹಂಕಾರಗಳು ಭಕ್ತಿಯ ಕುರುಹು ಎಂದು ತಿಳಿಸುತ್ತ ಅಹಂಕಾರ ನಿರ್ಮೂಲನೆಗೊಳಿಸಿದ.


ಮೂರನೆಯ ಪ್ರಸಂಗ

ಬದಲಾಯಿಸಿ

ಮತ್ತೊಂದು ಸಂದರ್ಭದಲ್ಲಿ ಮೇದರ ಕೇತಯ್ಯ ಬಿದಿರು ಕಡಿಯುವಾಗ ಕೆಳಗೆ ಬೀಳುತ್ತಾನೆ. ಎದೆಗೆ ಬಿದಿರು ಮೊಳೆ ಚುಚ್ಚಿ ಕೇತಯ್ಯ ಶಿವ ಸನ್ನಿಧಿ ಸೇರುತ್ತಾನೆ. ಆಗ ಬಸವಣ್ಣ ಮಾಚಯ್ಯನನ್ನು ಕರೆಸುವನು, ಮಾಚಯ್ಯ ಬಂದು ಶಿವಶರಣರ ಪ್ರಾಣವೇ ತನ್ನ ಪ್ರಾಣವೆಂದು ನಂಬಿದ ಬಸವಣ್ಣ ಇನ್ನೂ ಜೀವಂತವಾಗಿದ್ದು ತನ್ನ ವಚನ ಪಾಲಿಸಿಲ್ಲವೆಂದ. ಇದನ್ನರಿತ ಬಸವಣ್ಣ ಪ್ರಾಣ ಬಿಡುವನು. ಆ ಪ್ರಾಣ ಕೇತಯ್ಯನನ್ನು ಹಿಂಬಾಲಿಸುತ್ತದೆ. ಬಸವಣ್ಣನ ನಿಷ್ಠೆ ಮೆಚ್ಚಿದ ಮಾಚಯ್ಯ, ಶಿವನನ್ನು ಕುರಿತು ಕೆರಳಿ ನುಡಿದು 'ಇಬ್ಬರ ' ಪ್ರಾಣಗಳನ್ನು ಶಿವನನ್ನು ಮರಳಿ ಪಡೆದನೆಂದು ತಿಳಿದು ಬರುತ್ತದೆ.



ನಡೆ-ನುಡಿಯಲ್ಲಿ ತಪ್ಪಿದ ವ್ಯಕ್ತಿ ಎಂಥವರೇ ಆಗಿರಲಿ ಆಚರಣೆ ಪ್ರಸಂಗ ಬಂದಾಗ 'ದೇವರನ್ನೂ' ಕೂಡಾ ಪ್ರಶ್ನಿಸುವ ಪ್ರವೃತ್ತಿ ಮಾಚಯ್ಯನದಾಗಿತ್ತು



ವಚನಗಳ ರಕ್ಷಕ ಮಾಚಿದೇವ


ವಿವಿಧ ಧರ್ಮಗಳ ನೆಲೆಬೀಡು ಕರ್ನಾಟಕ. ಹನ್ನೆರಡನೇ ಶತಮಾನದಲ್ಲಿ ಜನರು ಸಾಮಾಜಿಕ ಅಸಮಾನತೆಯ ತುಳಿತಕ್ಕೆ ಒಳಗಾಗಿದ್ದರು. ಆ ಕಾಲಘಟ್ಟದಲ್ಲಿ ಸರ್ವರಿಗೂ ಸಮಪಾಲು, ಸಹಬಾಳ್ವೆ | ಒದಗಿಸಲು ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಪ್ರಕಾಶಮಾನವಾಗಿ ಕಂಡುಬರುತ್ತಾನೆ. ದಕ್ಷನನ್ನು ಸಂಹಾರ ಮಾಡಿ ಉತ್ಸಾಹದಿಂದ ಶಿವನನ್ನು ಕಾಣಲು ವೀರಭದ್ರ ಶಿವನ ಸಭೆಯೊಳಗೆ ನಡೆದು ಬರುತ್ತಾನೆ. ಸಭೆಯಲ್ಲಿರುವ ಶಿವಭಕ್ತನಿಗೆ ಈತನ ಉತ್ತರೀಯ ತುದಿ ತಾಕುತ್ತದೆ. ವಿಜಯದ ಉದ್ವೇಗದಲ್ಲಿ ಆದ ಈ ತಪ್ಪಿಗೆ, ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷಮುಕ್ತನಾಗಿ ಬರುವಂತೆ ಶಿವನ ಆದೇಶವಾಗುತ್ತದೆ. ಮಾಚಿದೇವನು ವೀರಭದ್ರನ ದೇವಾಂಶ ಸಂಭೂತ ಅವತಾರ ಪುರುಷ' ಎಂಬ ಪ್ರತೀತಿ ಇದೆ.


ವಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿ ಗ್ರಾಮದ ಪರುವತಯ್ಯ-ಸುಜ್ಞಾನಪ್ಪ | ದಂಪತಿಗೆ ಶರಣ 'ಮಾಚಯ್ಯ ಜನಿಸಿದ್ದು ಕ್ರಿ.ಶ.1120ರಿಂದ 1130ರ ನಡುವೆ. 12ನೇ ಶತಮಾನದ ಶಿವಶರಣರ ಮತ್ತು ಕಾಯಕನಿಷ್ಠೆಯುಳ್ಳವರ ಬಟ್ಟೆಗಳನ್ನು ಮಡಿ ಮಾಡಿ ಅವರಿಗೆ ಮುಟ್ಟಿಸುವ ಕಾಯಕ ಇವನದ್ದಾಗಿತ್ತು. ಕಾಯಕ ಮಾಡದ ಸೋಮಾರಿಗಳ, ಬಡವರನ್ನು ಶೋಷಿಸುವ, ದುರ್ಗುಣವುಳ್ಳವರ ಬಟ್ಟೆಗಳನ್ನೆಂದೂ ಆತ ಮುಟ್ಟುತ್ತಿರಲಿಲ್ಲ. ಅರಸುತನ ಮೇಲಲ್ಲ, ಅಗಸತನ ಕೀಳು' ಎಂಬುದನ್ನು ಜನಕ್ಕೆ ಸಾರಿದ. ಹನ್ನೆರಡನೇ ಶತಮಾನದ ಸಾಂಸ್ಕೃತಿಕ ವೀರ, ವಚನಗಳ ರಕ್ಷಕ, ಮಡಿವಾಳ ಮಾಚಿದೇವ ಜಂಗಮ ವೇಷದಲ್ಲಿ ಹಿಮಾಲಯಕ್ಕೆ ಬಂದ ಶಿವನ ಬಟ್ಟೆಯನ್ನು ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದು ರಕ್ತದಲ್ಲಿ ಬಟ್ಟೆ ಒಗೆದ ಕಥೆ ಮಾಚಿದೇವನ ಕಾಯಕನಿಷ್ಠೆ, ಹಿರಿಮೆಯನ್ನು ಸಾರುತ್ತದೆ.

ಮಹಾನ್ ವ್ಯಕ್ತಿತ್ವ: ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ ಇಷ್ಟಲಿಂಗ ಜಾರಿ ಕೆರೆಯೊಳಗೆ ಬಿತ್ತು. 'ಜಾರಿಬಿದ್ದ ಲಿಂಗ ಮತ್ತೇಕೆ, ಭಾವಲಿಂಗವೊಂದನೆ ಪೂಜಿಸಿದರೆ ಸಾಕು' ಎಂದು ಹುಲ್ಲಿನ ಹೊರೆ ಹೊತ್ತು ಮನೆಗೆ ತೆರಳಿದ. ಆಗ ಲಿಂಗದೇವ, ಮಾಚಿದೇವರ ಮೊರೆ ಹೋದ. ಮಾಚಿತಂದೆಗಳು, 'ಸವಿ ಬೇಕು, ಹಣ್ಣು ಬೇಡವೆಂದರೆ ಹೇಗೆ? ಗುರುಪೂಜೆ ಅರಿದೊಡೆ ಲಿಂಗಪೂಜೆ ಬಿಡಲಾಗದೆಂದು' ಚಂದಯ್ಯನವರ ತಪ್ಪಿನ ಅರಿವನ್ನುಂಟು ಮಾಡುವರು. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಮಡಿ ಹಾಸಿ ಸ್ವಾಗತಿಸುವ ಕೆಲಸ ಈತನದಾಗಿತ್ತು. ಮಾಚಿದೇವನ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ

ಮಹಾಘನತೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಅರಿವಿನ ವಚನಗಳು: 'ಹೆರರ, ನೆರನೆತ್ತಿ ಇರಿಯಲಾಗದು ಪ್ರಾಣಿಯ, ಜರಿಯಲಾಗದು ನುಡಿಯಲಾಗದಾರುವನು, ಹೆರರ ವಧುವ ಕಂಡು ಮರುಗದಿರ್ದಡೆ ಶಿವಲೋಕ ತಲಾ ಮಳಕವೆಂದ ಕಲಿದೇವರದೇವಾ' ಹೀಗೆ 450ಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮಾಜದ ಅಸ್ಪೃಶ್ಯತೆ, ಅಸಮಾನತೆ, ಮೌಡ್ಯಗಳ ವಿರುದ್ಧ ಹೋರಾಡಿ ಮಹಾನ್ ಶರಣನಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದವರಲ್ಲಿ ಮಾಚಿದೇವರು ಪ್ರಮುಖರು,




– ವಚನಗಳು -


1) ಅಂಗವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ ಜಂಗಮವೆ ಸಂಗವಾಗಿ, ಸಂಗವೆ ಸುಸಂಗವಾಗಿ 

ಪ್ರಾಣವೆ ಪ್ರಸಾದವಾಗಿ, ಪ್ರಸಾದವ ಪ್ರಾಣವಾಗಿ 

ಇಂತೀ ತ್ರಿವಿಧದಲ್ಲಿ ಸಂಪನ್ನನಾದ

ಸಮತಾ ಪ್ರಸಾದಿ, ಸನ್ನಹಿತ ಪ್ರಸಾದಿ, ಸಮಾಧಾನ ಪ್ರಸಾದಿ 

ಕಲಿದೇವಯ್ಯಾ, ಚೆನ್ನಬಸವಣ್ಣನ ಪ್ರಸಾದವ ಕೊಂಡು 

ನಾನು ಬದುಕಿದೆ ಕಾಣಾ ಪ್ರಭುವೆ



2) ಎನ್ನ ಆದಿಯ ನೆತ್ತುವನೆ ?

ಅದ ನೀನೆ ಬಲ್ಲೆ, ಘನ ಗಂಭೀರದಲ್ಲಿ ಹುಟ್ಟಿದನೆಂಬುದ 

ಎನ್ನ ಆದಿಯನ್ನೆತ್ತಿ ತೋರುವೆನೆ ?

ಅದ ನೀನೆ ಬಲ್ಲೆ, ಎನಗೆ ಕಾಯವಿಲ್ಲೆಂಬುದನು 

ಬಸವಣ್ಣನ ಕಾರಣ ಮರ್ತ್ಯಕ್ಕೆ ಬಂದರೆ

ಒಡಲು ಪಾಧಿಯೆಂಬುದಿಲ್ಲ ನೋಡಾ| 

ಒಡಲೆ ಬಸವಣ್ಣ, ಪ್ರಾಣವೆ ಚನ್ನಬಸವಣ್ಣ

ಎನ್ನ ಮಹಾಜ್ಞಾನವೆ ನೀವು ನೋಡಾ! 

ಇಂತು ಎರಡಿಲ್ಲದಿಪ್ಪಲ್ಲಿ ನುಡಿಯಡಗಿದ ಪರಿಯ 

ನಿಮ್ಮ ಶರಣ ಬಸವಣ್ಣ ಬಲ್ಲ ಕಾಣಾ ಕಲಿದೇವರ ದೇವಾ |


3) ಒಬ್ಬಳು ಆದಿಯುಗದಲ್ಲಿ ಮಾಯಾಂಗನೆ

ಹಲವು ಬಣ್ಣದ ವಸ್ತ್ರವ ನುಟ್ಟುಕೊಂಡು

ಹೆಡಗೆ ತುಂಬಿದ ದೇವರ ಹೊತ್ತುಕೊಂಡು

ಓ ದೇವರ ಕೊಳ್ಳಿರಯ್ಯಾ ಓ ದೇವರ ಕೊಳ್ಳಿರಯ್ಯಾ ಎಂದಳು

ಎಂದರೆ ಆ ದೇವರನಾರೂ ಕೊಂಬುವರಿಲ್ಲ

ನಾನು ಒಂದರುವೆಯ ಕೊಟ್ಟು ಆ ದೇವರ ಕೊಂಡು

ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದ

ಬದುಕಿದೆನು ಕಾಣಾ ಕಲಿದೇವರ ದೇವಾ|



4)ಎಲ್ಲೆಲ್ಲಿಯ ಪ್ರಾಣಿಯ ಕೊಲ್ಲದಿಹುದೆ ಧರ್ಮ 

ಒಲ್ಲ ದಿಪ್ಪುದೇ ತಪ, ಪರವಧುವಿನ ಆಸೆ

ತನ್ನ ಮನದಲ್ಲಿ ಇಲ್ಲದಿರ್ದಡೆ

ದೇವ ತಾನಲ್ಲಿಯೇ ಎಂದ ಕಲಿದೇವಯ್ಯ |




5) ಒಟ್ಟರ್ದ ಮಣ್ಣಿಗೂ ನಟ್ಟದ ಕಲ್ಲಿಗೂ

ಕಟ್ಟಿರ್ದ ಲಿಂಗವಡಿಯಾಗಿ ಬೀಳುವ ಲೊಟ್ಟಗುಡಿಹಿಗಳ ನೇನೆಂಬೆನಯ್ಯ ಕಲಿದೇವರದೇವಾ |



6) ಎಲ್ಲಾ ಭಕ್ತಿಯ ಭೇದವನು ಎಲ್ಲಾ ಕೂಚದ ಭೇದವನು 

ಎಲ್ಲಾ ಶೀಲದ ಭೇದವನು

ನಾನು ನಿಮಗೆ ಬಿನ್ನೈಸುವೆನು ಕೇಳಯ್ಯಾ

ನೀನು ಕರ್ತನಾಗಿ ನಾನು ಭ್ಋತ್ಯನಾಗಿ  ಅವಧರಿಸಯ್ಯಾ 

ಎಲ್ಲಾ ಭೇದಂಗಳನೂ ಬಸವಣ್ಣ ಮಾಡಿದನು ಆದಿಯನಾದಿಯ ಬಸವಣ್ಣ ಮಾಡಿದನು ಸಾಧ್ಯ ಅಸಾಧ್ಯವ ಬಸವಣ್ಣ ಮಾಡಿದನು ಲಿಂಗವನು ಜಂಗಮವನು ಬಸವಣ್ಣ ಮಾಡಿದನು 

ಎನ್ನ ಸರ್ವಸ್ವಾಯತವನು ಬಸವಣ್ಣ ಮಾಡಿದಕಾರಣ 

ಆ ಬಸವಣ್ಣನ ನೆನೆದು ಬದುಕಿದೆನು ಕಾಣಾ ಕಲಿದೇವರದೇವಾ |



7) ಶಿವ ತಾನೀತ ಮರ್ತ್ಯಲೋಕದ ಪಾವನದ ಮಾಡಲು 

ಗುರು ತಾನೀತ ಎನ್ನ ಭವರೋಗವ ಛೇದಿಸಲು 

ಭಕ್ತತಾನೀತನೆನಗೆ ವಿಸ್ತಾರವಾಗಿ

ಎನಗೆ ಜಂಗಮ ತಾನೀತ, ಅನಾದಿ ಸಂಸಿದ್ಧ ಘನಮಹಿಮನಾಗಿ 

ಲಿಂಗವು ತಾನೀತನೆನಗೆ ಪ್ರಾಣಲಿಂಗ ತಾನಾಗಿ ಎನ್ನ ವಿಸ್ತಾರವು ತಾನೀತನೆನ್ನ ನಿಲುಕಡೆಯು ತಾನಾಗಿ 

ಎನಗೆ ಸರ್ವ ಸ್ವಾಯತವ ಮಾಡಿದ ಮಹಿಮನೀತ ಕಾಣಾ 

ಕಲಿದೇವರದೇವಾ, ನಿಮ್ಮ ಶರಣ ಬಸವಣ್ಣನು |


8)ಅರಿದಲ್ಲದೆ ಗುರುವ ಕಾಣಬಾರದು

ಅರಿದಲ್ಲದೆ ಲಿಂಗವ ಕಾಣಬಾರದು

ಅರಿದಲ್ಲದೆ ಜಂಗಮವ ಕಾಣಬಾರದು

ಇಂತೀ ತ್ರಿವಿಧವು ಬಸವಣ್ಣನ ಕೃಪೆಯಿಂದ ಲೆನಗೆ- 

ಸಾಧ್ಯವಾಯಿತ್ತಾಗಿ

ಭಿನ್ನವಿಲ್ಲ ಕಾಣಾ ಕಲಿದೇವರದೇವಾ | 



9) ತನುವಿನಲ್ಲಿ ಹೊರೆಯಿಲ್ಲ ಮನದಲ್ಲಿ ವ್ಯಾಕುಳವಿಲ್ಲ 

ಭಾವದಲ್ಲಿ ಬಯಕೆಯಿಲ್ಲ ಅರಿವಿನಲ್ಲಿ ವಿಚಾರವಿಲ್ಲ 

ನಿಜದಲ್ಲಿ ಅವಧಾನವಿಲ್ಲ ನಿರ್ಲೇಪಸಂಗದಲ್ಲಿ ಬಿಚ್ಚಿ ಬೇರಾಗಲಿಲ್ಲ. 

ಕಲಿದೇವರದೇವಾ ನಿಮ್ಮಲ್ಲಿ ಬೆರಸಿ ಬೇರಾಗದಿದ್ದೆನು |



10) ಕಾಮದ ಕರಸ್ಥಲದಲ್ಲಿ ಗುರು ಸ್ವಾಯತವ ಮಾಡಿದೆನು 

ಕ್ರೋಧದ ನಯನದಲ್ಲಿ ಜಂಗಮ ಸ್ವಾಯತವ ಮಾಡಿದೆನು 

ಲೋಭವಿಲ್ಲದೆ ಪ್ರಸಾದವ ಗ್ರಹಿಸಿದನು

ಇಂತೀ ತ್ರಿವಿಧದಲ್ಲಿ ಶುದ್ಧನಾದೆನು ಕಾಣಾ ಕಲಿದೇವರ ದೇವಾ ನಿಮ್ಮಾಣೆ. |



11)ಎನ್ನ ಅಷ್ಟ ವಿಧಾರ್ಚನೆ ಶುದ್ಧವಾಯಿತ್ತಯ್ಯಾ 

ನೀವು ಮೂರ್ತಿಲಿಂಗವಾದ ಕಾರಣ

ಎನ್ನ ತನು ಮನ ಶುದ್ಧವಾಯಿತ್ತಯ್ಯಾ

ನೀವು ಜಂಗಮ ಲಿಂಗವಾದ ಕಾರಣ

ಎನ್ನ ಅಪ್ಯಾಯನ ಶುದ್ಧವಾಯಿತ್ತಯ್ಯಾ 

ನಿಮ್ಮ ಪ್ರಸಾದವ ಕೊಂಡನಾಗಿ


12) ಎನ್ನ ಕಾಮ ಕ್ರೋಧ ಲೋಭ ಮೋಹ ಮದ- 

ಮತ್ಸರಂಗಳೆಲ್ಲ ವಳಿದವಯ್ಯ

ನೀವು ಜ್ಞಾನ ಲಿಂಗವಾದ ಕಾರಣ

ಇಂತೀ ಸರ್ವದಲ್ಲಿ ಸನ್ನಹಿತನಾದನು ಕಾಣಾ ಕಲಿದೇವರ ದೇವಾ |



13) ಪ್ರಥಮ ಕಾಲದಲ್ಲಿ ದೇವಗಣ ಮಹಾಗ ಗಣ ಕಿನ್ನರಗಣ -

ಆಳಪಗಣ ಸಹಿತ 

ಸಂಗನ ಬಸವಣ್ಣನು ಗಣಪ್ರಸಾದಿಯಾಗಿ ಮರ್ತ್ಯ ಲೋಕಕ್ಕೆ ಮಹವ ತಂದು ಶಿವಗಣಂಗಳ ಮಾಡಿದ ಬಸವಣ್ಣನು ಸ್ವರೂಪು ಸಾರಾಯವನೂ ಪದಾರ್ಥವೆಂದಾತ ಬಸವಣ್ಣನು

ಕಲಿದೇವಯ್ಯ ನಿಮ್ಮ ಶರಣ ನಿಂತಹ ಮಹಿಮನು |



14) ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು 

ಬ್ರಾಹ್ಮಣನ ಭಕ್ತಿ ಮುಟ್ಟು ತಟ್ಟುವಿನಲ್ಲಿ ಹೋಯಿತ್ತು 

ಶೀಲವಂತನ ಭಕ್ತಿ ಪ್ರಪಂಚಿನಲ್ಲಿ ಹೋಯಿತ್ತು ಶೆಟ್ಟಿಯ ಭಕ್ತಿ ಕುಟಿಲ ವ್ಯಾಪಾರದಲ್ಲಿ ಹೋಯಿತ್ತು

ಇಂಥವರ ಭಕ್ತಿಗೆ ಊರ ಹೊರಗಣ ದೊಂಬನೇ ಸಾಕ್ಷಿ ಕಲಿ ದೇವರ ದೇವಾ |


15) ಉಂಡರೆ ಭೂತನೆಂಬರು, ಉಣದಿರ್ದರೆ ಚಕೋರಿಯೆಂಬರು

ಊರೊಳಗಿರ್ದರೆ ಸಂಸಾರಿಯೆಂಬರು, ಅಡವಿಯೊಳಗಿರ್ದರೆ- 

ಮರ್ಕಟನೆಂಬರು

ಮಾತನಾಡಿದರೆ ಪಾಪಕರ್ಮಿ, ಮಾತನಾಡದಿರೆ -

ಮುಸುಕ ಕರ್ಮಿ ಎಂಬರುಮಲಗಿರ್ದಡೆ ಜಡದೇಹಿಯೆಂಬರು, ಮಲಗದಿರ್ದರೆ-

ಚೋರನೆಂಬರು

ಇಂತೀ ವಸುಧೆಯೊಳಗೆ ಎಂಟು ವಿಧವ

ಕಳೆಯಲಳವಲ್ಲ ಕಾಣಾ ಕಲಿದೇವರ ದೇವಾ |






(ಸಂಗ್ರಹ) ಮತ್ತು ವಿಕಿಪೀಡಿಯ.