HRMS-1 ತಂತ್ರಾಂಶದಲ್ಲಿ ನೌಕರರ ಸೇವಾವಹಿ ಭಾಗದಲ್ಲಿ ಎಲ್ಲಾ ಸೇವಾ ವಿವರಗಳನ್ನು ಅಪ್ಡೇಟ್ ಮಾಡುವ ಕುರಿತು.

 ಹೆಚ್‌ಆರ್‌ಎಂಎಸ್‌-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಲಭ್ಯವಿರುವ ಅಧಿಕಾರಿ/ನೌಕರರ ಮಾಹಿತಿಯನ್ನು, ಹೆಚ್‌ಆರ್‌ಎಂಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿರುವುದಿಲ್ಲ. ಆದುದರಿಂದ ಹೆಚ್‌ಆರ್‌ಎಂಎಸ್‌-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಈ ಕೂಡಲೇ ಪರಿಶೀಲಿಸಿ, ಸರಿಪಡಿಸಲು ತಮ್ಮ ಅಧೀನದಲ್ಲಿನ ಎಲ್ಲಾ ಇಲಾಖಾ ಮುಖ್ಯಸ್ಥರಿಗೂ, ಸೂಕ್ತ ನಿರ್ದೇಶನ ನೀಡುವಂತೆ ಸರ್ಕಾರದ ಕಾರ್ಯದರ್ಶಿ (ಆ&ಸಂ) ಆರ್ಥಿಕ ಇಲಾಖೆ ರವರ ಸುತ್ತೋಲೆ ಸಂಖ್ಯೆ:ಆಇ 4 ಸನಿತಿ 2023 , ದಿನಾಂಕ:17.03.2023 ರಲ್ಲಿ ತಿಳಿಸಿದಂತೆ, ಈ ಕೂಡಲೇ ಕ್ರಮ ಕೈಗೊಳ್ಳಲು ಕೋರಿದೆ.