How to check our Adhar linked to pan or not

ಪಾನ್ ಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವ ಅವಧಿಯನ್ನು ಜೂನ್ 30 , 2023 ರವರೆಗೆ ವಿಸ್ತರಿಸಲಾಗಿದೆ.




ಪಾನ್‌ - ಆಧಾರ್ ಜೋಡಣೆ ಯಾಕೆ ಮಾಡಿಸಬೇಕು?


      ಪಾನ್ ಕಾರ್ಡ್‌ ಒಬ್ಬ ನಾಗರೀಕನ ಎಲ್ಲಾ ರೀತ್ಯ ವ್ಯವಹಾರದ ಮೇಲೆ ನಿಗಾ ವಹಿಸಲು ಹಾಗೂ ತೆರಿಗೆ ಅರ್ಹತೆ ನಿರ್ದರಿಸುವ ಮಾನದಂಡವಾಗಿದೆ ಹಾಗಾಗಿ ಒಬ್ಬ ವ್ಯಕ್ತಿಗೆ ಒಂದೇ ಪಾನ್ ಕಾರ್ಡ್‌ ಇರಬೇಕೆಂಬುದು ಆದಾಯ ತೆರಿಗೆ ಇಲಾಖೆಯ ಉದ್ದೇಶ. 


       ಆದರೆ ಕೆಲವೊಮ್ಮೆ ಒಬ್ಬನೇ ವ್ಯಕ್ತಿಗೆ 2 ಪಾನ್ ಕಾರ್ಡ್ಗಳು ದೊರೆತ ಸನ್ನಿವೇಷಗಳು ಹಾಗೂ ಆ ವ್ಯಕ್ತಿಗಳು 2 ಪಾನ್‌ ಕಾರ್ಡ್ ಗಳನ್ನು ಆದಾಯ ತೆರಿಗೆಯನ್ನು ಮರೆಮಾಚಲು ಬಳಸಿದ ಮಾಹಿತಿ ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬಂದಾಗ ಕೇಂದ್ರ ಸರ್ಕಾರದ ಆದೇಶದೊಂದಿಗೆ 01-07-2017 ನಂತರ ಮಾಡಿಸುವ ಎಲ್ಲಾ ಪಾನ್ ಕಾರ್ಡ್‌ ಗಳು ಆದಾರ್ ಜೋಡಣೆಯೊಂದಿಗೇ ಮಾಡಬೇಕು ಹಾಗೂ ಈಗಾಗಲೇ ಪಾನ್ ಕಾರ್ಡ್‌ ಮಾಡಿಸಿರುವವರು ಕೂಡ ತಮ್ಮ ಪಾನ್ ಕಾರ್ಡ್‌ನ್ನು ಆದಾರ್ ನೊಂದಿಗೆ ಜೋಡಿಸ ಬೇಕೆಂದು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿತು. 


ಜೋಡಣೆ ಯಾವಾಗಿಂದ ಪ್ರಾರಂಭ ಯಾವ-ಯಾವಗ ವಿಸ್ತರಣೆ ಹಾಗೂ ಶುಲ್ಕ


ಜೋಡಣೆ ಮಾಡಲು ಆದೇಶಿಸಿದ ದಿನಾಂಕ:

 29th June 2017

ಜೋಡಣೆ ಮಾಡಲು ಕೊನೆಯ ದಿನಾಂಕ: 

30-09-2019 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 1ನೇ ವಿಸ್ತರಣೆ: 

31-12-2019 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 2ನೇ ವಿಸ್ತರಣೆ: 

31-03-2020 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 3ನೇ ವಿಸ್ತರಣೆ: 

31-06-2020 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 4ನೇ ವಿಸ್ತರಣೆ: 

31-03-2021 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 5ನೇ ವಿಸ್ತರಣೆ: 

31-06-2021 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 6ನೇ ವಿಸ್ತರಣೆ: 

30-09-2021 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 7ನೇ ವಿಸ್ತರಣೆ: 

31-03-2022 ಶುಲ್ಕ : 0 (ಉಚಿತ)

ಜೋಡಣೆ ಮಾಡಲು ಕೊನೆಯ ದಿನಾಂಕದ 8ನೇ ವಿಸ್ತರಣೆ: 

30-06-2022 ಶುಲ್ಕ : 500 (ದಂಡ)

ಜೋಡಣೆ ಮಾಡಲು ಕೊನೆಯ ದಿನಾಂಕದ 9ನೇ ವಿಸ್ತರಣೆ:

31-03-2023 ಶುಲ್ಕ : 1000 (ದಂಡ)


ಯಾಕೆ ಇಷ್ಟು ಬಾರಿ ವಿಸ್ತರಣೆ ಮತ್ತು ಈಗ ಯಾಕೆ ದಂಡ:

ಮೊದಲೆರಡು ಬಾರಿ ಜನರಿಗೆ ಮಾಹಿತಿ ಕೊರತೆ ಸಂಬಂಧಿಸಿದಂತೆ ವಿಸ್ತರಣೆ ಮಾಡಲಾಗಿತ್ತು. 

      ನಂತರ 30-09-2021 ರ ವರೆಗಿನ ಎಲ್ಲಾ ವಿಸ್ತರಣೆ ಕೋವಿಡ್ ಸಂಕಷ್ಟದ ಕಾರಣದಿಂದ ಮಾಡಲಾಯಿತು. ಹಾಗೂ 31-03-2022 ರ ವರೆಗೂ ವಿಸ್ತರಣೆಯನ್ನು ಮಾಡಿಯೂ ಹಲವು ಮಂದಿ ಪಾನ್ ಆಧಾರ್ ಜೋಡಣೆ ಮಾಡಿಸದ ಕಾರಣ ದಂಡ ಸಹಿತ ಜೋಡಣೆ ಪ್ರರಂಭವಾಯಿತು.

   ಲಿಂಕ್ ಮಾಡಿಸುವ ಅವಧಿ ಮತ್ತೆ ವಿಸ್ತರಣೆ ಸಾಧ್ಯತೆ ಬಗ್ಗೆ ಗೊಂದಲಗಳಿವೆ. ಮಾರ್ಚ್ 31-2023 ಕೊನೆಯ ದಿನವಾಗುವ ಸಾಧ್ಯತೆ ಹೆಚ್ಚಾಗಿದೆ.



ಯಾರಿಗೆ ಪಾನ್‌ ಲಿಂಕಿಂಗ್ ನಿಂದ ವಿನಾಯಿತಿ:

1) 80 ವರ್ಷ ಮೇಲ್ಪಟ್ಟವರು 

2) ಭಾರತೀಯ ಪ್ರಜೆ ಅಲ್ಲದವರು

3) ಅನಿವಾಸಿ ಭಾರತೀಯರು

4) ಜಮ್ಮು ಕಾಶ್ಮೀರ, ಅಸಾಂ ಮತ್ತು  ಮೆಘಾಲಯಾ ರಾಜ್ಯಕ್ಕೆ ಸೇರಿದವರು.


ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯಾ ಎನ್ನುವ ಮಾಹಿತಿ ಪಡೆಯಲು ಈ ಲಿಂಕ್ ಬಳಸಬಹುದು 👇👇👇👇


CLICK HERE


ಒಂದು ವೇಳೆ ಲಿಂಕ್ ಆಗಿಲ್ಲ ಎಂದಾದರೆ ಇದೇ ಮಾರ್ಚ್ 31 ನೇ ತಾರೀಖಿನ ಒಳಗಾಗಿ 1000₹ ದಂಡದೊಂದಿಗೆ ಲಿಂಕ್ ಮಾಡಿಸಬೇಕು. ಮುಂದಿನ ದಿನಗಳಲ್ಲಿ ದಂಡದ ಮೊತ್ತ ಹೆಚ್ಚಾಗಬಹುದು...

ಲಿಂಕ್ ಮಾಡಿಸಲು ಈ ಕೆಳಗಿನ ಲಿಂಕ್ ಬಳಸಬಹುದು  👇👇👇



CLICK HERE