ಶಾಲೆಗಳಲ್ಲಿ ವಿಶಿಷ್ಟ ಆಧಾರ್ ದಾಖಲಾತಿ/ ಆಧಾರ್ ನವೀಕರಿಸುವ ಶಿಬಿರಗಳನ್ನು ಹಮ್ಮಿಕೊಳ್ಳುವ ಬಗ್ಗೆ.

 ವಿದ್ಯಾರ್ಥಿಗಳು ಶಾಲಾ ದಾಖಲಾತಿಗೆ, 

ವಿದ್ಯಾರ್ಥಿವೇತನವನ್ನು ಪಡೆಯಲು, ವಿವಿಧ

 ಪ್ರವೇಶ ಪರೀಕ್ಷೆಗಳ ಹಾಜರಾತಿಗೆ ಹಾಗೂ 

ಇನ್ನಿತರ ಸರ್ಕಾರಿ(DBT) ಸೇವೆಗಳನ್ನು 

ಪಡೆಯಲು ಆಧಾರ್‌ ಸಂಖ್ಯೆಯನ್ನು

ಉಪಯೋಗಿಸುವುದು ಕಡ್ಡಾಯವಾಗಿದೆ.

ಈಗಾಗಲೇ 5 ವರ್ಷ ಹಾಗೂ 15 ವರ್ಷ 

ಪೂರೈಸಿರುವ ಮಕ್ಕಳ ವಿದ್ಯಾರ್ಥಿಗಳಿಗೆ 

ಒದಗಿಸಿರುವ ಆಧಾರ್‌ ಮಾನ್ಯತೆಯನ್ನು 

ದೃಢೀಕರಿಸಲು ಸದರಿಯವರ ಆಧಾರ್ 

ಸಂಖ್ಯೆಯನ್ನು ಬಯೋಮೆಟ್ರಿಕ್ಸ್

ನವೀಕರಣಗೊಳಿಸುವುದು (Biometrics 

Update) ಸಹ ಕಡ್ಡಾಯವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 

ಉಪನಿರ್ದೇಶಕರು (ಆಡಳಿತ) ತಮ್ಮ 

ವ್ಯಾಪ್ತಿಯ ಶಾಲೆಗಳಲ್ಲಿ ವ್ಯಾಸಂಗ 

ಮಾಡುತ್ತಿರುವ ಮಕ್ಕಳು ಆಧಾರ್‌ ಪಡೆದಿರುವ 

ಬಗ್ಗೆ ಹಾಗೂ ಆಧಾರ್ ಬಯೋಮೇಟ್ರಿಕ್ ನ್ನು 

ನವೀಕರಣಗೆ ಸಂಬಂಧಿಸಿದಂತೆ ರಜಿಸ್ಟ್ರಾರ್/

ಜಿಲ್ಲಾಡಳಿತ, ಇ-ಆಡಳಿತ ಇಲಾಖೆ,

ಅಟಲ್‌ಜಿ ಜನಸ್ನೇಹಿ ಕೇಂದ್ರ, EDCS UIDAI 

ರಾಜ್ಯ ರಜಿಸ್ಟ್ರಾರ್‌ಗಳ ಸಹಯೋಗದೊಂದಿಗೆ 

ಸೂಕ್ತ ಕ್ರಮವಹಿಸಲು ಹಾಗೂ ವರದಿ ನೀಡಲು 

ಉಲ್ಲೇಖ(4) ರಲ್ಲಿ ಸೂಚಿಸಲಾಗಿರುತ್ತದೆ.

ಆದರೆ ಸದರಿ ವಿಷಯದ ಕುರಿತು ಈವರೆಗೂ 

ಯಾವ ವರದಿಯೂ ಈ ಕಛೇರಿಗೆ

ಸ್ವೀಕೃತವಾಗಿರುವುದಿಲ್ಲ, ಆದ್ದರಿಂದ ತುರ್ತಾಗಿ 

ಸದರಿ ವಿಷಯದ ಕುರಿತು ವರದಿಯನ್ನು 

ಸಿದ್ಧಪಡಿಸಿ ಸಲಿಸಲು ಸೂಚಿಸಿದೆ.