ಕೆಜಿಐಡಿ ಆನ್ ಲೈನ್ ಲೋನ್ ಪಡೆಯಲು ಅನುಸರಿಸುವ ಹಂತಗಳು.

     ಆತ್ಮೀಯ ಶಿಕ್ಷಕ ಬಂಧುಗಳೇ ಕೆಜಿಐಡಿ ಲೋನ್ ಪಡೆಯಲು ಇನ್ನು ಮುಂದೆ ಬಿಇಓ ಕಚೇರಿಗೆ ಅರ್ಜಿ ನೀಡಬೇಕಾಗಿಲ್ಲ.

 ಕಾರಣ,  ಈ ತಿಂಗಳಿನಿಂದಲೇ ಅದು ಆನ್ಲೈನ್ ಆಗಿದೆ. ಆನ್ಲೈನ್ ನಲ್ಲಿ ಲೋನ್  ಅಪ್ಲಿಕೇಶನ್ ಹಾಕುವಾಗ ಈ ಕೆಳಕಂಡ ಸೂಚನೆಗಳನ್ನು ಪಾಲಿಸಬೇಕು.....


    1) ಗೂಗಲ್ ನಲ್ಲಿ ಕೆಜಿಐಡಿ ಲಾಗಿನ್  ವೆಬ್ ಸೈಟ್ ಗೆ  ಹೋಗಬೇಕು.


KGID LOGIN PAGE LINK : 👉

  KGID ONLINE 

  

2) ನಿಮ್ಮ ಮೊದಲ ಕೆಜಿಐಡಿ ನಂಬರ್ ನ್ನು ಎಂಟ್ರಿ ಮಾಡಿ.


3) ಎಂಟ್ರಿ ಮಾಡಿದ ತಕ್ಷಣ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ ಓಟಿಪಿ ಬರುತ್ತದೆ.


4) ಇದಕ್ಕೂ ಮೊದಲು  ಆಧಾರ್ ನಲ್ಲಿನ  ಮೊಬೈಲ್ ನಂಬರ್ ಮತ್ತು  ಹೆಚ್ .ಆರ್ .ಎಂ. ಎಸ್ ನ  ಮೊಬೈಲ್ ನಂಬರ್ ಒಂದೇ ಆಗಿರಬೇಕು.

5) ಓಟಿಪಿ ಎಂಟರ್ ಮಾಡಿ ಕೆಜಿಐಡಿ ವೆಬ್ಸೈಟ್ನಲ್ಲಿ ಹೋಗಿ ಮೆನು ಓಪನ್ ಮಾಡಿ ಲೋನ್ಸ್ ಗೆ ಹೋಗಬೇಕು. 


6) ನಿಮ್ಮ ಎಲ್ಲಾ ಪಾಲಿಸಿ ನಂಬರ್ ಗಳು ಅಲ್ಲಿ ಬಿತ್ತರಿಸಲಾಗಿರುತ್ತದೆ.


7) ನಿಮ್ಮ ಎಲ್ಲಾ ಪಾಲಿಸಿಗಳ ಒಟ್ಟು ಮೊತ್ತ ಸಹ ಅಲ್ಲಿ ಕ್ರೋಢೀಕರಣ ಆಗಿರುತ್ತದೆ.

 

8) ನೀವು ಲೋನ್ ಗೆ ಅಪ್ಲೈ ಮಾಡುವ ದಿನಾಂಕದಂದು ನಿಮ್ಮ ಲೋನ್ ಎಲಿಜಿಬಿಲಿಟಿ ಎಷ್ಟು ಎಂದು ಅದೇ ತೋರಿಸುತ್ತದೆ. 


9) ಆ ಎಲಿಜಿಬಲಿಟಿ ಲೋನ್ ಅಮೌಂಟ್ ನ  ಮಿತಿ ಒಳಗಡೆ ಲೋನ್ ಅಮೌಂಟ್ ಎಂಟರ್ ಮಾಡಿ.

   

10) ಸಬ್ಮಿಟ್ ಕೊಡಿ...


11) ಈಗ ಅದು ಬಿಇಓ ಕಚೇರಿ ಲಾಗಿನ್ ಗೆ ಹೋಗಿರುತ್ತದೆ.


12) BEO ಕಚೇರಿಯವರು ಸೆಂಡ್ ಮಾಡಿದ ಮೇಲೆ  ಜಿಲ್ಲಾ ಕೆಜಿಐಡಿ ಕಚೇರಿ LOGIN ಗೆ ಹೋಗುತ್ತದೆ.


13) ಅಲ್ಲಿ ವೆರಿಫಿಕೇಷನ್ ಆಗಿ ಕೆ2 ಚಲನ್ ಮುಖಾಂತರ ಜಿಲ್ಲಾ ಖಜಾನೆಗೆ ಹೋಗಿ ನಿಮ್ಮ ರೆಸಿಪಿಯಂಟ್ ಐ ಡಿ ಮುಖಾಂತರ ನಿಮ್ಮ ಸಂಬಳದ ಖಾತೆಗೆ ಲೋನ್ ಹಣ ಜಮಾ ಆಗುತ್ತದೆ.


( ಮಾಹಿತಿ : ಸಂಗ್ರಹ )